ದಶಮಾನದ ಸಂಭ್ರಮ ದಶಮಾನದ ಸಂಭ್ರಮ ಕೇಶವನಾ ಹರಕೆಯಿಂದ ಲೋಕಹಿತದ ಬಯಕೆಯಿಂದ ರೂಪುಗೊಂಡ ಕುಂಜಕೆ ಪ್ರೇರಣೆಯ ಪುಂಜಕೆ ದಶಮಾನದ ಸಂಭ್ರಮ ದಶಮಾನದ ಸಂಭ್ರಮ || ಪ || ಬೆಳಗು ಸಂಜೆ ಭಗವೆರಶ್ಮಿ ಮಂಗಲಮಯ ಪರಿಸರ ತೆರೆದ ಬಯಲು ಸೆಳೆವ ನಿಲುವು ನೋಟವಿದು ಮನೋಹರ ವರವಿಶಾಲ ಕುಂಜಕೆ ಬೆಳಕಿನೊಂದು ಪುಂಜಕೆ || 1 || ಬಾಲಮನಕೆ ಮೋದವೆರೆದು ತರುಣರೆದೆಗೆ ಸ್ಫೂರ್ತಿಯ ಹಿರಿಯರೊಲಿದು ಹರಸುವಂತೆ ಬರೆದು ಮೇಲುಪಂಕ್ತಿಯ ಗರಿಮೆ ಪಡೆದ ಕುಂಜಕೆ ಚೈತನ್ಯದ ಪುಂಜಕೆ || 2 || ಹಸಿರು ಹೊತ್ತ ಹೂಗಿಡ ಮರ, ಮಾತೃಕೇಂದ್ರ […]
ಹೃದಯಂಗಮ ಹಿಂದು ಸಂಗಮ ಬಲು ಸಂಭ್ರಮ ಬಂಧು ಸಮಾಗಮ || ಪ || ನಾನಾ ವಿಧದಾಮಿಷಕೊಳಗಾಗಿ ಧರ್ಮಾಂಧರ ದೌಷ್ಟ್ಯಕೆ ತಲೆಬಾಗಿ ಮತಬಾಹಿರ ಹತಭಾಗ್ಯರು ನರಳಿರೆ ಮಾತೆಯ ಮಮತೆಯ ಕರೆಯು ಹೃದಯಂಗಮ || 1 || ಮಡಿಲಡಿಯಲಿ ಹುಡಿಯಾಗಿಹ ಜನರು ಒಲುಮೆಯ ಸ್ಪರ್ಶಕೆ ಹಾತೊರೆದವರು ಅರಿವಿನ ಅರುಣೋದಯದೊಡಗೂಡಿ ನಲಿಯುತ ಬರುತಿಹ ನೋಟ ಹೃದಯಂಗಮ || 2 || ಬೇಕಿಲ್ಲೆಮಗೆ ಒಣ ವೇದಾಂತ ಬೇಕಿದೆ ಐಕ್ಯದ ಘನಸಿದ್ಧಾಂತ ತರುಣ ಜನಾಂಗಕೆ ಸ್ಫೂರ್ತಿಯ ನೀಡುವ ಅರುಣಪತಾಕೆಯ ಲಾಸ್ಯ ಹೃದಯಂಗಮ || 3 […]