ಸಾಮರಸ್ಯದ ನವ್ಯಯುಗಕೆ ನಿಮಗಿದೋ ಆಮಂತ್ರಣ | ಕಣ್ಣತೆರೆದು ಭ್ರಮೆಯ ತೊರೆದು ನೀಡಿ ಹಾರ್ದಿಕ ಸ್ಪಂದನ ಮಾಡಿ ಸೀಮೋಲ್ಲಂಘನ || ಪ || ಭರತ ಭೂಮಿಯ ಚರಿತೆಯೊಡಲಲಿ ಅಡಗಿದೆ ಕಥೆ ಸಾವಿರ ಮಡಿಲ ಮಕ್ಕಳ ಸೋಲುಗೆಲುವಿನ ನೋವು ನಲಿವಿನ ಹಂದರ ಪ್ರಗತಿ ಪತನದ ಕಥನ ಮಥನದಿ ಸತ್ಯವಾಗಲಿ ಗೋಚರ ಮತ್ತೆ ಮೂಡಲಿ ಭಾಸ್ಕರ || 1 || ಖಡ್ಗಬಲದಿಂ ಕುಟಿಲತನದಿಂ ನಡೆಯಿತಿಲ್ಲಿ ಮತಾಂತರ ಒಂದೆ ನೆತ್ತರ ಬಂಧುಗಳಲಿ ಹಗೆಯ ವಿಷಬೀಜಾಂಕುರ ಒಡೆದು ಆಳುವ ಕಪಟ ನೀತಿಯು ತಂದಿತೋ ಗಂಡಾಂತರ […]