ಸೇವೆಯ ಸೇತುವೆ ಕಟ್ಟಲು ಬನ್ನಿ ವ್ಯಕ್ತಿ ಸಮಾಜದ ನಡುವೆ ನಾಡದೇವತೆಗೆ ಅರ್ಪಿಸಬನ್ನಿ ತನುಮನಧನಗಳ ಒಡವೆ || ಪ || ಸೇವೆಯೆ ತತ್ವದ ಸಾರವು ನಿಜದಿ ಸೇವೆಯೆ ಜೀವನ ಧರ್ಮ ಸ್ವಾರ್ಥದುರಾಶೆಯ ನೀಗಿಸಿ ಬಾಳನು ಸಾರ್ಥಕಗೊಳಿಸುವ ಮರ್ಮ ಕಂಗೆಡಿಸುವ ಕಗ್ಗತ್ತಲಕೂಪದಿ ಸೇವೆಯೆ ದಾರಿದೀಪ ದುಃಖಿತ ಜನತೆಯ ಕಂಬನಿಯೊರೆಸುವ ಕರುಣೆಯ ಮಾತೃಸ್ವರೂಪ || 1 || ಅಕ್ಷರವಿದ್ಯೆಯ ಕಲಿಸಿ ನಿರಕ್ಷುರಕುಕ್ಷಿಗಳಿಗೆ ಒಲವಿಂದ ಅಕ್ಷಯ ರಕ್ಷಣೆ ನೀಡುತ ಶೋಷಿತ ಜನತೆಗೆ ಛಲಬಲದಿಂದ ಕಾರ್ಪಣ್ಯದ ಘಟಸರ್ಪದ ದರ್ಪವ ಮುರಿಯಲು ಸೇವೆಯೆ ಮಾರ್ಗ ತ್ಯಾಗ […]
ಕೇಶವನಾ ಬಲಿದಾನ ಹಿಂದು ಸಮಾಜದ ಪುನರುತ್ಥಾನಕೆ || ಪ || ಹಿಂದು ಹಿಂದುವಿನ ಹೃದಯದಲಿ ರಾಷ್ಟ್ರಪ್ರೇಮ ರಸವೆರೆಯುತಲೀ ಬಂಧು ಭಾವದ ನಿಜವನು ತೋರಿ ಹಿಂದು ಭಿನ್ನತೆಯ ದಮನವ ಗೈದಾ ಸಂಘಟನ ಸೂತ್ರಧಾರೀ || 1 || ಆರ ಅಕ್ಕರೆಯ ಬಾವುಟವೂ ಹಿಂದು ಹೃದಯದಲಿ ಮೆರೆಯುವುದೋ ಆರ ಶಬ್ದಕೇ ಯುವಕರ ಮನವೂ ಏಕ ಕಂಠದಿಂ ಓಗೊಡುತಿಹುದೋ ಹಿಂದು ಕಾಂತಿಗೆ ಮಣಿದರ್ಪಣವೋ || 2 || ಈಶ್ವರೀಯತೆಯ ಬೆಳೆಯಿಸಲೂ ರುಧಿರ ಜಲವ ತಾನೆರೆದಿಹನೂ ಅಡಿಗಡಿಗೂ ತಾ ವಿಷವ ಸ್ವಾಗತಿಸಿ ಪ್ರೇಮ […]