ಹೃದಯಂಗಮ ಹಿಂದು ಸಂಗಮ

ಹೃದಯಂಗಮ ಹಿಂದು ಸಂಗಮ ಬಲು ಸಂಭ್ರಮ ಬಂಧು ಸಮಾಗಮ || ಪ || ನಾನಾ ವಿಧದಾಮಿಷಕೊಳಗಾಗಿ ಧರ್ಮಾಂಧರ ದೌಷ್ಟ್ಯಕೆ ತಲೆಬಾಗಿ ಮತಬಾಹಿರ ಹತಭಾಗ್ಯರು ನರಳಿರೆ ಮಾತೆಯ ಮಮತೆಯ ಕರೆಯು ಹೃದಯಂಗಮ || 1 || ಮಡಿಲಡಿಯಲಿ ಹುಡಿಯಾಗಿಹ ಜನರು ಒಲುಮೆಯ ಸ್ಪರ್ಶಕೆ ಹಾತೊರೆದವರು ಅರಿವಿನ ಅರುಣೋದಯದೊಡಗೂಡಿ ನಲಿಯುತ ಬರುತಿಹ ನೋಟ ಹೃದಯಂಗಮ || 2 || ಬೇಕಿಲ್ಲೆಮಗೆ ಒಣ ವೇದಾಂತ ಬೇಕಿದೆ ಐಕ್ಯದ ಘನಸಿದ್ಧಾಂತ ತರುಣ ಜನಾಂಗಕೆ ಸ್ಫೂರ್ತಿಯ ನೀಡುವ ಅರುಣಪತಾಕೆಯ ಲಾಸ್ಯ ಹೃದಯಂಗಮ || 3 […]

Read More