ಜಗವನ್ನೆ ಬೆಳಗಿಸಲು ನಾಡು ಸಜ್ಜಾಗಿಹುದು

ಜಗವನ್ನೆ ಬೆಳಗಿಸಲು ನಾಡು ಸಜ್ಜಾಗಿಹುದು ಅಸ್ತಮಿಸಿದೆ ನೀನು ಜನಮನದ ಸೂರ್ಯ| ಸ್ವರ್ಣಯುಗ ಸನ್ನಿಹಿತವಾಗಿರುವ ಸಮಯದಲಿ ಭಾರವಾಗಿಹುದಿಂದು ಭಾರತದ ಹೃದಯ || 1 || ಅಸ್ತಮಿಸಿದೆ ನೀನು……. ಅನುದಿನವು ಅನುಕ್ಷಣವು ಆತಂಕವೆದುರಿಸಿರೆ ಸಮ್ಮಿಶ್ರ ಸರ್ಕಾರದಾ ಪ್ರಯೋಗ| ನಿನ್ನ ಕೌಶಲದಿಂದ ಸಮರಸದ ಬಲದಿಂದ ಸಾಧಿಸಿದೆ ಅಭ್ಯುದಯದತುಲ ವೇಗ || 2 || ಅಸ್ತಮಿಸಿದೆ ನೀನು…… ರಾಷ್ಟ್ರವಾಣಿಯ ವಿಶ್ವಸಂಸ್ಥೆಯಲಿ ಮೊಳಗಿಸಿದೆ ಮಾನ್ಯತೆಯ ತಂದಿತ್ತೆ ಭಾರತಕೆ ನೀನು| ನಮ್ಮೇಳ್ಗೆ ಸಹಿಸದಿಹ ಅಗ್ರರಾಷ್ಟ್ರಗಳಿಂಗೆ ಅಣ್ವಸ್ತ್ರದೆಚ್ಚರಿಕೆ ನೀಡಿರುವೆ ನೀನು || 3 || ಅಸ್ತಮಿಸಿದೆ ನೀನು…….. […]

Read More