ಸಾಗರದ ಅಲೆಯಂತೆ ದಾಳಿಯದು ನಡೆಯುತ್ತಿದೆ ದೇಶವದು ನಿಂತಿಹುದು ಬಂಡೆಯಂತೆ ಹಿಂದುತ್ವವೀ ನೆಲದ ರಕ್ಷಣೆಗೆ ನಿಂತಿರಲು ಕ್ಷಾತ್ರ ತೇಜದ ವಂಶ ಸೋಲದಂತೆ || ಪ || ಸ್ವಾರ್ಥ ಲಾಭ ಮೋಹದಿಂದ ರಾಷ್ಟ್ರ ಮರೆತ ತರುಣರು ತ್ಯಾಗದೌತಣಕ್ಕೆ ಮಣಿದು ಸಂತರಾಗಿ ಬಂದರು ಭೇದ ಭಾವ ಕ್ರೋಧ ಮದವ ಬಿಡಿಸಿ ಶಾಂತಿ ಸಹನೆ ಜೊತೆಯಾಗಿ ಬೆಳಗುತಿರಲು ಅಮರರೆಲ್ಲ ಪುತ್ರರು || 1 || ರಾಷ್ಟ್ರಕಾಯ ಮೃತ್ಯುಂಜಯ ಪ್ರಗತಿ ಪತನಕಾಣದು ಧರ್ಮ ಪ್ರಾಣವಾಗಿ ನೆಲೆಸೆ ಸೋಲು ಗೆಲ್ಲಲಾರದು ದೇಶ ಭಕ್ತಿ ಶಕ್ತಿಯಾಗಿ ಪಂಕ್ತಿ-ಪಂಕ್ತಿ […]