ಓಗೊಡುತ ಉತ್ತುಂಗ ಸಾಧನೆಯ ಕರೆಗೆ

ಓಗೊಡುತ ಉತ್ತುಂಗ ಸಾಧನೆಯ ಕರೆಗೆ ನಡೆದಿಹರು ಸಾಸಿರದ ಸಾಧಕರು ಇಲ್ಲಿ ಸಂಘಶಕ್ತಿಯ ಭವ್ಯ ಸಾಗರದ ಕಡೆಗೆ ಹರಿದಿಹರು ಸಾವಿರದ ಸರಿತೆಯರು ಇಲ್ಲಿ || ಪ || ಹನಿಹನಿಯು ಝರಿಯಾಗಿ ತೊರೆಯಾಗಿ ನದಿಯಾಗಿ ಜಲಧಿರೂಪವ ತಳೆವ ರಮ್ಯನೋಟ ಅಣುಅಣುವು ಒಂದಾಗಿ ಶಕ್ತಿ ಪರ್ವತವಾಗಿ ಏಕತೆಗೆ ಲಭಿಸಿಹುದು ಅಗ್ರಪೀಠ || 1 || ಅಡಿಗಡಿಗೆ ನಡುಗಿಸಿದ ಕೇಡುಗಳ ಸೇಡುಗಳ ಜಾಡಝಾಡಿಸಿ ನಾಡಗುಡಿಯ ಕಟ್ಟಿ ರೂಢಿಯೊಳಗೂಡಿರುವ ಮೌಢ್ಯವನು ಸದೆಬಡಿದು ನಡೆದಿಹರು ಸಾಹಸದ ಪಡೆಯ ಕಟ್ಟಿ || 2 || ಬೆಟ್ಟದೆತ್ತರ ಬೆಳೆದ […]

Read More

ಸಾಧನೆಯ ವರ ಮಾರ್ಗದಲ್ಲಿ

ಸಾಧನೆಯ ವರ ಮಾರ್ಗದಲ್ಲಿ ಬಂಧನಗಳ ಪ್ರೀತಿ ಎಲ್ಲಿ ? || ಪ || ಶಲಭದಂತೆ ದೀಪದಲ್ಲಿ ಅಸ್ತಿತ್ವವನ್ನು ಕಳೆವ ನಮಗೆ ಜ್ಯೋತಿಯಂತೆ ಜ್ವಲಿಪ ನಮಗೆ ದಹಿಪ ಜ್ವಾಲೆಯ ಭೀತಿ ಎಲ್ಲಿ ? || 1 || ಸಿಂಧುವೊಡನೆ ಮಿಲನಕಾಗಿ ಸರ್ವಸ್ವವನ್ನು ಹೋಮ ಗೈವ ಅತಲ ಮಿಲನದ ಗುರಿಯ ನಮಗೆ ಶೂನ್ಯತಟದಾ ದೃಷ್ಟಿ ಎಲ್ಲಿ ? || 2 || ದೀಪದಂತೆ ಸತತ ಬೆಳಗಿ ಕತ್ತಲನ್ನು ದೂರ ಸರಿವ ಜೀವನದ ಕಣಕಣವ ಸುರಿವ ನಮಗೆ ನಿಶೆಯ ಭೀತಿ ಎಲ್ಲಿ […]

Read More