ಏಕತೆ ಸಾರುವ ಸೂತ್ರದಿ ಸೇರುವ

ಏಕತೆ ಸಾರುವ ಸೂತ್ರದಿ ಸೇರುವ ಬನ್ನಿರಿ ಭೋಗವ ತ್ಯಜಿಸುತಲಿ ಭಾರತ ಮಾತೆಯ ಚರಣದ ಸೇವೆಗೆ ದಣಿಯದ ಶಕ್ತಿಯ ಗಳಿಸುತಲಿ           || ಪ ||   ಅನುಪಮ ಕಾರ್ಯಕೆ ಅರ್ಪಿತ ಬದುಕಿನ ಜೀವನ ಮೌಲ್ಯವ ಬೆಳೆಸುತಲಿ ತರತಮ ಭಾವದ ಕತ್ತಲ ನೀಗಿ ಮಾನವ ಸ್ವರ್ಗವ ಸೃಜಿಸುತಲಿ          || 1 ||   ದೇಹದ ಗುಡಿಯಲಿ ಧ್ಯೇಯವು ಬೆಳಗಲಿ ದ್ವೇಷ ಅಸೂಯೆಗೆ ಎಡೆಗೊಡದೆ ಕಾಯಕೆ ದೃಢತೆಯ ಚಿತ್ತಕೆ ಸ್ಫೂರ್ತಿಯ ತುಂಬುವ […]

Read More

ಕೋಟಿಕಂಠಗಳಿಂದ ಜಗಕೆ ಸಾರುವೆವಿಂದು

ಕೋಟಿ ಕಂಠಗಳಿಂದ ಜಗಕೆ ಸಾರುವೆವಿಂದು ಹಿಂದುಗಳು ನಾವೆಂದು ಹಿಂದುರಾಷ್ಟ್ರವಿದೆಂದು || ಪ || ನಮ್ಮ ನೆಲಜಲಗಡಿಯ ಗುಡಿನುಡಿಯ ರಕ್ಷಣೆಗೆ ಪೂರ್ಣಜೀವನವನ್ನು ಅರ್ಪಿಸುವೆವೆಂದು ಶಪಥವನು ಸ್ವೀಕರಿಸಿ ಧ್ಯೇಯದೀಪವ ಧರಿಸಿ ಸಾಗುವೆವು ಗುರಿಯೆಡೆಗೆ ಭರದೊಳಿಂದು || 1 || ಗಾದಿಯೇರಿದ ಜನರು ಹಾದಿತಪ್ಪಿಹರಿಂದು ಬೀದಿಪಾಲಾಗಿಹುದು ನಾಡಮಾನ ಬೂದಿ ಮುಚ್ಚಿದ ಕೆಂಡದಂತಿರ್ದ ಯುವಶಕ್ತಿ ಕೆರಳಿಹುದು ಧರಿಸಿಹುದು ಸ್ವಾಭಿಮಾನ || 2 || ಜನಮನವ ಕೆಣಕುತಿಹ ದಾಸ್ಯದವಶೇಷಗಳ ನಿಶ್ಚಯದಿ ನಿಶ್ಶೇಷಗೊಳಿಸಲಿಹೆವು ಐಕ್ಯಶಕ್ತಿಯ ತಳೆದು ವಿಘ್ನಕೋಟಿಯ ತುಳಿದು ನೈಜ ರಾಷ್ಟ್ರೀಯತೆಯ ಮೆರೆಸಲಿಹೆವು || 3 […]

Read More

ಬನ್ನಿ ಹಿಂದು ವೀರರೇ ಮುಂದೆ ಸಾಗುವಾ

ಬನ್ನಿ ಹಿಂದು ವೀರರೇ ಮುಂದೆ ಸಾಗುವಾ ವೀರಮಾತೆ ಪುತ್ರರೆಂದು ಧೀರ ಸಂತಾನರೆಂದು ಧರೆಯೊಳಿಂದು ಸಾರುವಾ ಮುಂದೆ ಸಾಗುವಾ || ಪ || ತಾಯ ಸೇವೆಗಾಗಿ ಬನ್ನಿ ಧ್ಯೇಯಕಾಗಿ ದುಡಿವ ಬನ್ನಿ ನಿದ್ದೆ ತೊರೆಯುವಾ, ಎದ್ದು ನಿಲ್ಲುವಾ, ಸಿದ್ಧರಾಗುವಾ ಕತ್ತಲನ್ನು ಕಬಳಿಸುತ್ತ, ಸುತ್ತ ಬೆಳಕನರಳಿಸುತ್ತ ಮುಕ್ತ ರವಿಯು ಮೂಡುವಾ ನೋಟ ನೋಡುವಾ || 1 || ಭಗವ ಧ್ವಜ ಹಾರುತಿಹುದು, ಮುಗಿಲ ಮೇಲೇರುತಿಹುದು ಶುಭವ ಕೋರುತಾ, ಅಭಯವೀಯುತಾ, ಪ್ರಭೆಯ ಬೀರುತಾ ಭೋಗ ವಿಷಯ ರಾಗ ತ್ಯಜಿಸಿ, ತ್ಯಾಗ ಭಾವ […]

Read More

ಎಲ್ಲಾ ಭೇದ ಮರೆತು

ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ          || ಪ || ದುಡಿದರು ಕಾಣುತ ಕೇಶವರಂದು ಐಕ್ಯದ ಸುಂದರ ಕನಸು ಪಣತೊಡಿರಿಂದು ಮಾಡುವೆವೆಂದು ಎಲ್ಲವನೂ ನನಸು ಜಾತಿ ಮತಗಳ ಧನಿಕ ಬಡವರ ಭೇದವ ತರಬೇಡಿ ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರೂ ಕೈ ನೀಡಿ           || 1 || ಗಂಗೆ ತುಂಗೆ ಕಾವೇರಿಯ ಜಲ ನಮಗಾಗಿಯೆ ಎಂದು ಮನ […]

Read More