ಸರಸ್ವತೀ…….. ಸಮಿತಿಯ ಸಾರಥಿ ಮಮತಾಮಯಿ ನೀವ್ ಮಧುರ ಸ್ಮೃತಿ || ಪ || ಲಕ್ಷ್ಮೀಯನಂದು ಸಂಧಿಸಿದಾ ದಿನ ಗಂಗಾಯಮುನೆಯರ ಅದ್ಭುತ ಮಿಲನ ರಾಷ್ಟ್ರಚಿಂತನೆಗರ್ಪಿತ ಜೀವನ ಸಾರ್ಥಕ ಭಾವದಿ ಸರ್ವ ಸಮರ್ಪಣ || 1 || ಶಿಸ್ತಿನ ಬದುಕಿಗೆ ನಿರ್ಮೋಹದ ಬೆಡಗು ಕ್ರಿಯಾಶೀಲೆಗೆ ಮೃದುವಾಣಿಯ ಸೊಬಗು ಆತ್ಮೀಯತೆಯ ಅನುಪಮ ಪುನುಗು ಕಷ್ಟನಷ್ಟದಿ ಧೈರ್ಯದ ಮೆರುಗು || 2 || ಏನಿದು ತಾಯೇ ನಿಮ್ಮಯ ಮೋಡಿಯು ಹೃನ್ಮನ ಸೆಳೆಯುವ ಸರಳ ಸ್ವಭಾವವು ಮಾತಿಗೆ ನಿಲುಕದ ಮಾತೃತ್ವದ ಸುಧೆಯು ಸುಮದಲಿ ಬೆರೆತ […]