ಬಾಳ ನೌಕೆ ಏರಿ ನಮ್ಮ ಬಾಳ ಪಯಣ ಸಾಗಿದೆ ಶೀಲ ವಸನ ಹಾಯಿ ಬಿಗಿದು ಧೈರ್ಯ ಪಥಿಕನಾಗಿದೆ || ಪ || ವೀರ ವ್ರತದ ಸ್ತಂಭವೇರಿ ಧ್ಯೇಯ ಧ್ವಜವು ಹಾರಿದೆ ಜ್ಞಾನ ಶೌರ್ಯ ತ್ಯಾಗ ಐಕ್ಯ ಸಂದೇಶವ ಸಾರಿದೆ || 1 || ಮರುತನೊದೆತ ಕಡಲ ಮೊರೆತ ಸೆಳೆತ, ಸುಳಿಗಳಗಣಿತ ಚಪಲ ಮನವ ಶಮನಗೊಳಿಪ ಚತುರಮತಿಯೇ ನಾವಿಕ || 2 || ಚಿತ್ತ ವೃತ್ತಿ ತಡೆವ ಭಿತ್ತಿ ಉತ್ತರಮುಖಿ ಹಿರಿಯರು ಸತ್ಪಥವನು ತೋರಿ ಗತಿಯ ಸುಸ್ಥಿತಿಯಲಿ ಇಡುವರು […]
ಧ್ಯೇಯದಾ ಹಾದಿಗೆ ಬಾಳ ನಡಿಗೆ ಸಾಗಿದೆ ಭಾವ ಹಣತೆ ಉರಿದಿದೆ ತಾಯ ಗುಡಿಯ ಬೆಳಗಿದೆ || ಪ || ಕರದಿ ಸಂಘಸೂತ್ರ ಹಿಡಿದು ಭರದಿ ಹಿಂದುತೇರನೆಳೆದು ತರತಮ ವಿಷ ಕಳೆಯ ಕೀಳಿ ಪರಕೀಯತೆ ಪದರ ಸೀಳಿ ಸಂಘಮಂತ್ರ ಜಪಿಸುತಾ ಬಂಧುಭಾವ ಬೆಳೆಸುತಾ || 1 || ಸ್ವಾರ್ಥ ಭಾವ ದೂರಗೊಳಿಸಿ ಕೀರ್ತಿಮೋಹ ಬದಿಗೆ ಸರಿಸಿ ಅರಳಿಸುತಲಿ ಶುದ್ಧ ಶೀಲ ಅರ್ಪಿಸುತಲಿ ಬದ್ಧ ಬಾಳ ಬನ್ನಿ ತಾಯಸೇವೆಗೆ ಉರಿಸಿ ಕಾಯ ದೀವಿಗೆ || 2 || ವ್ಯಕ್ತಿ ವ್ಯಕ್ತಿಗಳನು […]
ಧ್ಯೇಯದ ಹಾದಿಗೆ ಬಾಳ ನಡಿಗೆ ಸಾಗಿದೆ ಭಾವ ಹಣತೆ ಉರಿದಿದೆ ತಾಯ ಗುಡಿಯ ಬೆಳಗಿದೆ || ಪ || ಕರದಿ ಸಂಘ ಸೂತ್ರ ಹಿಡಿದು ಭರದಿ ಹಿಂದು ತೇರನೆಳೆದು ತರತಮ ವಿಷ ಕಳೆಯ ಕೀಳಿ ಪರಕೀಯತೆ ಪದರ ಸೀಳಿ ಸಂಘ ಮಂತ್ರ ಜಪಿಸುತ ಬಂಧು ಭಾವ ಬೆಳೆಸುತ || 1 || ಸ್ವಾರ್ಥ ಭಾವ ದೂರಗೊಳಿಸಿ ಕೀರ್ತಿ ಮೋಹ ಬದಿಗೆ ಸರಿಸಿ ಅರಳಿಸುತಲಿ ಶುದ್ಧ ಶೀಲ ಅರ್ಪಿಸುತಲಿ ಬದ್ಧ ಬಾಳ ಬನ್ನಿ ತಾಯ ಸೇವೆಗೆ ಉರಿಸಿ ಕಾಯ ದೀವಿಗೆ […]