ಓಗೊಡುತ ಉತ್ತುಂಗ ಸಾಧನೆಯ ಕರೆಗೆ ನಡೆದಿಹರು ಸಾಸಿರದ ಸಾಧಕರು ಇಲ್ಲಿ ಸಂಘಶಕ್ತಿಯ ಭವ್ಯ ಸಾಗರದ ಕಡೆಗೆ ಹರಿದಿಹರು ಸಾವಿರದ ಸರಿತೆಯರು ಇಲ್ಲಿ || ಪ || ಹನಿಹನಿಯು ಝರಿಯಾಗಿ ತೊರೆಯಾಗಿ ನದಿಯಾಗಿ ಜಲಧಿರೂಪವ ತಳೆವ ರಮ್ಯನೋಟ ಅಣುಅಣುವು ಒಂದಾಗಿ ಶಕ್ತಿ ಪರ್ವತವಾಗಿ ಏಕತೆಗೆ ಲಭಿಸಿಹುದು ಅಗ್ರಪೀಠ || 1 || ಅಡಿಗಡಿಗೆ ನಡುಗಿಸಿದ ಕೇಡುಗಳ ಸೇಡುಗಳ ಜಾಡಝಾಡಿಸಿ ನಾಡಗುಡಿಯ ಕಟ್ಟಿ ರೂಢಿಯೊಳಗೂಡಿರುವ ಮೌಢ್ಯವನು ಸದೆಬಡಿದು ನಡೆದಿಹರು ಸಾಹಸದ ಪಡೆಯ ಕಟ್ಟಿ || 2 || ಬೆಟ್ಟದೆತ್ತರ ಬೆಳೆದ […]
ಮಧುಮಾರ್ಗವಿರಲಿ, ಈ ಸಾಧನೆಯ ಪರ್ವದಲಿ ತನುವಾಗಿ ಮನವಾಗಿ ಅವ ತುಂಬಿ ಬರಲಿ || ಪ || ಸೀಳೊಡೆದ ಬಿರುಸ್ವರವು ಮೊರೆದು ಕೇಳಿಹ ಕಾಲ ತಾಯೊಡಲ ಮುಡಿಗಳಲಿ ಪರದುರುಳ ಜಾಲ ಅಂಜುವೆದೆ ನಮದಲ್ಲ ಅವನೆಂದ ನುಡಿಗಳ ನಿಜವಿಂದು ಮಾಡುವೆವು ಎದುರಿಸಿ ಸವಾಲುಗಳ || 1 || ಪರಜಾತಿ ಕಿರಿಜಾತಿ ಮನದಿ ಕುಣಿದಿಹ ಗಳಿಗೆ ತರತಮವು ದೇವರಿಗೂ ಬಿಡರು ಗುಡಿಯೊಳಗೆ ಹಿಂದು ಪತಿತನು ಅಲ್ಲ ಎಂಬವನ ನಂಬಿಕೆ ಒಂದಾಗಿ ಸಾಕಾರಗೊಳಿಸುವೆವು ಇಂದಿಗೆ || 2 || ಜಾಗರಣ ಮನೆ-ಮನೆಗೆ ಮೂಡಿಸುವ […]