ಹಚ್ಚುವೆವು ದೀಪ, ಹಚ್ಚುವೆವು ದೀಪ ಎಚ್ಚೆತ್ತ ಹಿಂದುಗಳ ಭಾವೈಕ್ಯ ರೂಪ ವಾದಗಳ ಭೇದಗಳ ಎಲ್ಲ ಬದಿಗಿಟ್ಟು ದೇಶಸೇವೆಗೆ ಬದ್ಧಕಂಕಣವ ತೊಟ್ಟು || ಪ || ನಮ್ಮದೇ ನೆಲವೆಂದು, ಜಲವೆಂದು, ಫಲವೆಂದು ಛಲದಿಂದ ಬೆಳೆಸಿ ಭುವಿ ಬಂಗಾರ ಬಂಧು ಹೊಟ್ಟೆ ತುಂಬಾ ಅನ್ನ ಬಟ್ಟೆ ಬರೆ ಗಿರೆ ಬನ್ನ ಯಾವ ಆಮಿಷಕಿಲ್ಲ ಇನ್ನು ಬಲಿಯಿಂದು || 1 || ಧರ್ಮಕಲೆ ಸಂಸ್ಕೃತಿಯ ಜಾಗೃತಿಯಗೊಳಿಸುವೆವು ನಮ್ಮ ಗತ ಇತಿಹಾಸ ಮರಳಿ ಬರಲಿಹುದು ‘ಐಕ್ಯವೊಂದೇ ಮಂತ್ರ ಐಕ್ಯದಿಂದಲೇ ಸ್ವತಂತ್ರ’ ಒಕ್ಕೊರಲ ಉದ್ಘೋಷ […]
ಕೇಶವನ ಕರಗಳಿಂದ ರೂಪು ತಳೆದ ಯಾದವ ತೆರೆಯ ಮರೆಯ ಸಾಧಕರಿಗೆ ಅಮರಸ್ಫೂರ್ತಿಯಾದವ ಧ್ಯೇಯಮೂರ್ತಿಯಾದವ … ಹರಸು ನಮ್ಮ ಬಾಂಧವ || ಪ || ಬಾಲ್ಯದಾ ದಿನಗಳಲ್ಲಿ ಮಧುರ ದನಿಯ ಗಾಯಕ ಸಂಘಟನೆಯ ದೀಕ್ಷೆ ಧರಿಸಿ ಆದೆಯೊ ಘನಸಾಧಕ ಧ್ಯೇಯಕಾಗಿ ದೇಹ ಸವೆಸಿದಂಥ ನಿನ್ನ ಜೀವನ ಸಾರ್ಥಕತೆಯ ವೀರಗಾಥೆ ನಿನ್ನ ಜನುಮ ಪಾವನ || 1 || ಕಲ್ಲುಮುಳ್ಳು ವಿಘ್ನಕೋಟಿ ಎಲ್ಲ ಮೆಟ್ಟಿ ಕ್ರಮಿಸಿದೆ ಹಸಿವು ನಿದ್ದೆ ಪರಿವೆ ತೊರೆದು ನಾಡಿಗಾಗಿ ಶ್ರಮಿಸಿದೆ ಶೂನ್ಯದಲ್ಲಿ ಸೃಷ್ಟಿಗೈದ ನಿನ್ನ ಕಾರ್ಯಶಕ್ತಿಗೆ […]