ರಣಮಂತ್ರದುಚ್ಚಾರ ಘನಶೌರ್ಯದೋಂಕಾರ ಹೊರಹೊಮ್ಮುತಿಹುದಥರ್ವಣದ ಮಾರಣದ ಹೂಂಕಾರ || ಪ || ಪುನರುದಿತವಾಗುತಿದೆ ಮಾನಹತ ಪಾಣಿಪತ ವಿಜಗೀಷು ಭಾರತಕೆ ಜಯದೊಲವ ತರಲು ಚಾರಣರ ರಣಗಾನದನುರಣನದಾಹ್ವಾನ ನವಚೇತನವನಿತಿಹಾಸಕೆರೆಯುತಿರಲು || 1 || ನೆಲದೆದೆಯು ಬೇಗುದಿಯ ರುಧಿರನರ್ತನಕೆಂದು ಕುದಿವಗ್ನಿಪರ್ವತವೆ ಬಾಯ್ದೆರೆದು ಇಂದು ಬಾಗದ ಮನೋಬಲವೆ ಭಾರತದ ಭುಜಬಲವೆ ಕೊಡು ಸಾಕ್ಷಿ ಜಗದಕ್ಷಿ ನಿಜವರಿಯಲೆಂದು […]