ದಕ್ಷತೆಯಿಂದಲಿ ರಕ್ಷೆಯ ಕಟ್ಟುವ ಹಿರಿಮೆಯ ನೆನಪಿಸುತ ಇದರೊಲುಮೆಯ ಗಮನಿಸುತ | ಅಕ್ಷಯವಾಗಲಿ ಲಕ್ಷ್ಮಣ ಪ್ರೀತಿಯು ಸಮರಸ ಮೆರೆಯಲಿದೋ ಜಗವನೆ ಬೆಳಗಲಿದೋ || ಪ || ಮೇಲು-ಕೀಳಿನ ಭೇದವ ಮರೆಯುವ ಬಡವ-ಬಲ್ಲಿದ ಭಾವವ ನೀಗುವ ಪಂಡಿತ-ಪಾಮರ ತರತಮ ತೊರೆಯುವ ಜಾತಿ ಧರ್ಮವ ಮರೆಯುತ ಒಲವಲಿ ಕಟ್ಟುವ ಕೈಗಳಿಗೇ…ತಟ್ಟಲಿ ಮನಗಳಿಗೆ || 1 || ಪುರಾಣದಿಂದಲೂ ರಕ್ಷೆಯ ಮಹಿಮೆ ಚರಿತೆಯಲೂ ಇದೆ ಇದರದೇ ಹಿರಿಮೆ ಸೋದರ ಭಾವವು ಸೋದರಿ ರಕ್ಷಣೆ ಇಂದಿನ ದಿನದೀ ಎಲ್ಲರ ಭದ್ರತೆ ನಮದದು […]
ಸುರಕ್ಷೆಯ ರಕ್ಷೆಯ ಕಟ್ಟುತ ನಾವು ಮುಂದಡಿಯಿಟ್ಟು ಸಾಗೋಣ ವೇದದ ನಾಡಲಿ ಭೇದವ ತೋರದೆ ಭ್ರಾತೃತ್ವದ ಸೆಲೆ ಬೆಳೆಸೋಣ || ಪ || ದಿವ್ಯ ಪರಂಪರೆ ಗತವೈಭವವನು ನೆನಪಿಸೊ ಪುಷ್ಪವ ಧರಿಸೋಣ ಮೇಲುಕೀಳುಗಳ ಕಳೆಯನು ಕೀಳುತ ಮಾನವತೆಯ ಮಧು ಸವಿಯೋಣ || 1 || ಭಾಷಾಪ್ರಾಂತದ ನಡುವಿನ ಮುನಿಸಿಗೆ ಇಂದಿಗೆ ಮಂಗಳ ಹಾಡೋಣ ಸೋದರತ್ವದ ಕಂಪನು ಬೀರುತ ನಾಡಿನ ಏಳ್ಗೆಗೆ ಶ್ರಮಿಸೋಣ || 2 || ಹೆಜ್ಜೆಹೆಜ್ಜೆಗೂ ಹೃದಯವ ಬೆಸೆಯುತ ರಾಷ್ಟ್ರದ ತೇರನ್ನೆಳೆಯೋಣ ಮಾತೃಮಂದಿರದ ರಕ್ಷಣೆ ಕಾರ್ಯಕೆ ಎಲ್ಲೆ […]
ರಕ್ಷೆಯ ಕಟ್ಟುವೆವು ನಾವು ರಕ್ಷೆಯ ಕಟ್ಟುವೆವು ನಿಶ್ಚಯ ಮಾಡಿಹೆವು ಬಲಾಢ್ಯ ರಾಷ್ಟ್ರವ ಕಟ್ಟುವೆವು || ಪ || ಹಿಂದೂ ಸಾಗರದಲೆಗಳಸಂಖ್ಯ ಬ್ರಹ್ಮದೇವನಿಗು ಎಣಿಸಲಸಾಧ್ಯ ಕಟ್ಟಿಹ ರಕ್ಷೆಗಳಗಣಿತವಣ್ಣ ಹೊಳೆ ಹೊಳೆಯುತಲಿದೆ ಕೇಸರಿಬಣ್ಣ || 1 || ಒಂದೇ ತಾಯಿಯ ಮಕ್ಕಳು ನಾವು ಒಂದೇ ಮಣ್ಣಿನ ಕಣಗಳು ನಾವು ಮೇಲುಕೀಳುಗಳ ಭೇದವನಳಿಸಿ ಸ್ನೇಹದ ಪ್ರೇಮದ ಭಾವನೆ ಬೆಳೆಸಿ || 2 || ಎಮ್ಮೊಳಹೊರಗಿನ ಶತ್ರುಗಳನ್ನು ಸುಟ್ಟುರಿಸುತ ದುರ್ಮಾರ್ಗಿಗಳನ್ನು ದೃಢಸಂಕಲ್ಪದ ಸತ್ಪಥದಲ್ಲಿ ಮುನ್ನುಗ್ಗುತ ಜನಮನವನು ಗೆಲ್ಲಿ || 3 || ಮೈಮರೆವಿನ […]