ಭರತವರ್ಷದಿತಿಹಾಸ ಪುರುಷನಂತರಂಗ ತೆರೆಯಲಿ ಗತ ಸಹಸ್ರ ವರ್ಷದೆಲ್ಲ ವಿಸ್ಮೃತಿಯ ತೆರೆಯ ಹರಿಯಲಿ || ಪ || ವಿವಿಧ ವಾದ ಹೊಕ್ಕಿರಿದ ಜಗದ ಜನರದೆಯ ದೀನ ನಾದ ಅಲೆದು ಬಂದು ತಂಗಿಹುದು ದಣಿದು ಹಿಮನಗದ ನೆಲದೊಳೀಗ ಸುಭಾಗಿ ಧಾರ್ಮಿಕರೆ ಕಾರ್ಮಿಕರೆ ಕರೆ ಕೇಳಿ ಮೇಲಕೇಳಿ ಅಳಲನಾಂತ ಜರ್ಝರಿತ ಭೀತ ಮಾನವತೆಗಭಯ ಹೇಳಿ || 1 || ಅಂದಿನಿಂದಲೇನೇನು ನಂದಿತೀ ರಾಷ್ಟ್ರ ಹೃದಯದೊಳಗೆ ನಿದ್ದೆ ಕಳೆದು ಮೇಲೆದ್ದು ಬರಲಿ ನಮ್ಮದೇ […]