ಪುಣ್ಯಭೂಮಿಯಲಿ ಧ್ಯೇಯದ ಗುಡಿಯು ಗುಡಿಯಲಿ ಅರಳಿವೆ ಅಸಂಖ್ಯ ಸುಮವು ನಡೆದಿದೆ ರಾಷ್ಟ್ರದ ಅರ್ಚನೆಯು || ಪ || ಈಶನ ಕಾರ್ಯಕೆ ಜನಿಸಿದ ಕಾಯ ತುಂಬಿದೆ ಸೋಲರಿಯದ ಬಲ ಧೈರ್ಯ ಧಮನಿ ಧಮನಿಯಲಿ ಹರಿದಿದೆ ಶೌರ್ಯ ನಾಡ ರಕ್ಷಣೆಗೆ ಅನುದಿನವು || 1 || ಜಗ ತಲೆಬಾಗುವ ಶೀಲದ ನಡತೆ ಜನಮನ ಬೆಳಗುವ ಜ್ಞಾನದ ಹಣತೆ ಸಂಚಯ ನವನೇತೃತ್ವದ ಕ್ಷಮತೆ ಅಮಿತೋತ್ಸಾಹದಿ ಕ್ಷಣಕ್ಷಣವು || 2 || ಅಂಜದೆ ಸವಾಲುಗಳ ಸ್ವೀಕರಿಸಿ ಗೆಲ್ಲುವ ಛಲ […]
ಪುಣ್ಯಪಾವನ ಧ್ಯೇಯ ಸಾಧಿಸಿ ಧನ್ಯವಾಗಲಿ ನಮ್ಮ ಜೀವನ || ಪ || ಮಾತೆ ಸೀತೆಯ, ರಾಮಚಂದ್ರನ ಪಾವನಾಂಘ್ರಿಯ ಸ್ಪರ್ಶ ಹೊಂದಿದ ತಾಯೆ ನಿನ್ನಯ ಧೂಳಿನಿಂದಲಿ ಸ್ವಚ್ಛಗೊಳ್ಳಲಿ ಮಲಿನ ತನುಮನ || 1 || ರಜಪುತಾನದ ಚಿತೆಗಳಿಂದಲಿ ಧಗಧಗಿಸಿ ಉರಿದಗ್ನಿಜ್ವಾಲೆಯ ಕಿಡಿಯು ಬೆಳಗಲು ಅಂತರಂಗವ ಅಳಿದು ಕಳೆವುದು ದೌಷ್ಟ್ಯಭೀಷಣ || 2 || ತುಚ್ಛ ಆಸೆಯು ಮನದೊಳಿಲ್ಲವು ತೃಣಸಮಾನವು ಒಡವೆ ವಸ್ತ್ರವು ಶುಭದ ವಸನವೆ ನಮ್ಮ ವೇಷವು ಶೀಲ ನಮ್ಮಯ ದಿವ್ಯ ಭೂಷಣ || 3 || ಮಾತೃಭೂಮಿಯ […]
ಧ್ಯೇಯ ತಪಸಿನ ಪುಣ್ಯ ಫಲವಿದು ಹಿಂದು ಐಕ್ಯದ ಮಂತ್ರವು ರಾಷ್ಟ್ರಪುರುಷನ ಚರಣಸೇವೆಗೆ ಅರ್ಪಿತವು ಈ ಕಮಲವು || ಪ || ಕ್ಞಾತ್ರತೇಜವ ಹರಿಸಿ ನೀಡುವ ಜಡತೆಗಿಂದೆ ತರ್ಪಣ ಹಿಂದು ಹಿಂದುವಿನೊಡಲ ಕಂಪಿಗೆ ನಮ್ಮ ಜೀವನ ಅರ್ಪಣ ಧರ್ಮ ರಾಜ್ಯದ ನವ್ಯ ಸೃಷ್ಟಿಗೆ ಭಗವಾ ಎಮಗೆ ಪ್ರೇರಣೆ ನಮ್ಮ ಹೃದಯಗಳೆಲ್ಲ ಸಿದ್ಧವು ಮಾಡಲಿಂದೆ ಸಮರ್ಪಣ || 1 || ಅರಿಗಳೆದೆಯನು ನಡುಗಿಸಿದೆ ಈ ಸಂಘ ಶಕ್ತಿಯ ತೇಜವು ಹಿಂದು ಶಕ್ತಿಯ ಅಂಗ ನಾವು ಸಾರ್ಥಕವು ಈ ಜೀವವು ಮೇಲುಕೀಳುಗಳೆಲ್ಲಾ […]
ಆಹಾ ಎಂಥ ಪುಣ್ಯ ಈ ಜನುಮ ಓಹೋ ದಿವ್ಯಧಾರಿಣಿಯ ಮಹಿಮ ಇಲ್ಲಿ ವೈಭೋಗ ವೈಭವ ನರ್ತನ ಎನ್ನ ತಾಯಿ ಭಾರತಿಗೆ ನಮನ || ಪ || ನಿನ್ನ ಒಡಲಿನಲಿ ಮಮತೆ ಮಡಿಲಿನಲಿ ಕಡಲ ಬಿತ್ತರದ ಹಿರಿಮೆಗಳು ಭವ್ಯ ಮನಸುಗಳ ರಮ್ಯ ದಿನಿಸುಗಳ ಉನ್ನತ ಸಾಧನೆ ಗರಿಮೆಗಳು || 1 || ಸಮರ ರಂಗದಲಿ ನೇಣುಗಂಬದಲಿ ನೆತ್ತರಿತ್ತ ಬಲಿ ನೆನಪುಗಳು ಯೋಗ ತ್ಯಾಗಗಳ ಕರ್ಮಕಮ್ಮಟದಿ ನುಗ್ಗಿ ಮುಗುಳ್ನಗುವ ಹೊಳಪುಗಳು || 2 || ತತ್ವ ದರ್ಶನದ ಅನುಭವ ಅನುಭಾವ […]