ಪ್ರದೀಪ್ತವಾಗಿದೆ ಹೃದಯ ಅನಂತ

ಪ್ರದೀಪ್ತವಾಗಿವೆ ಹೃದಯ ಅನಂತ ಆಸೇತು ಹಿಮಾಚಲ ಪರ್ಯಂತ             || ಪ || ಜಗದೊಳಗೆದ್ದಿಹ ಹಾಲಾಹಾಲಗಳ ಮೃಗಮಾನವರುದ್ಧಾರಕೆ ಕುಡಿದು ಪೊರೆದಿಹ ವಿಷಕಂಠನ ಹಣೆಗಣ್ಣಿನ ದಾವಾನಲವೀ ನಾಡಿನೊಳಿಹುದು        || 1 || ಮನ್ವಂತರಗಳ ದೈವೀ ಸಂಸ್ಕೃತಿ ಮೈಗೂಡಿರುವೀ ನಾಡಿನ ಜನಕೆ ನರಜಾತಿಯ ಸೆಳೆದಮರತೆಗೊಯ್ಯುವ ಮಬ್ಬಾಗದೆ ಹಬ್ಬುವ ಹೆಬ್ಬಯಕೆ          || 2 || ಬಂದೆರಗಿರೆ ಹಿಂದುವಿನೆದೆ ಬೆಂಕಿಗೆ ಬಹು ರೀತಿಯ ಭಯ ಭೀತಿಯ ಕೆಡಕು […]

Read More