ನಮ್ಮದೆಲ್ಲರ ಬಾಳಿದಾಗಲಿ ನಿನ್ನದೇ

ನಮ್ಮದೆಲ್ಲರ ಬಾಳಿದಾಗಲಿ ನಿನ್ನದೇ ಪ್ರತಿಬಿಂಬದಂತೆ ಪೂರ್ಣವಾಗಲಿ ಧ್ಯೇಯ ಸಾಧನೆ ಹಿರಿಮೆಗೇರಲಿ ಭರತಮಾತೆ || ಪ || ಬಾಳನುರಿಸಿದೆ ಬಾಲ್ಯಜೀವನದಿಂದಲಂತಿಮ ಕ್ಷಣದ ವರೆಗು ಬದುಕಿನುದ್ದಕು ಬಿಡದೆ ನಡೆದಾ ಮೂಕ ತಪವನು ಮರೆವುದೆಂತು ? ಅಳೆಯಲಸದಳ ವಿಧಿಗು ನಿನ್ನಯ ಕ್ಷೀರಸಾಗದಂಥ ಬದುಕು ಬಿಂದುವಿನ ತೆರದಿಂದಲೆಮಗಾ ಸಿಂಧುವಿನ ಸವಿಮಿಲನ ಸಾಕು || 1 || ಶ್ರಮವ ಸಹಿಸಿದೆ ವಿಶ್ರಮಿಸದೇ ಜನ್ಮದೊಳು ನೀನೊಂದು ಕ್ಷಣವು ರಾಷ್ಟ್ರಯಜ್ಞಕೆ ಆಜ್ಯವಾಯಿತು ನೆತ್ತರಿನ ಪ್ರತ್ಯೇಕ ಕಣವು ಆತ್ಮದಾಹುತಿಯಿತ್ತು ಸಾರಿದೆ ದೇಶಮುಕ್ತಿಯ ಮಂತ್ರವೆಮಗೆ ತಾಗಲೆಮ್ಮಯ ಹೃದಯಪ್ರಣತಿಯ ಯಜ್ಞ ಜ್ವಾಲೆಯದೊಂದೆ […]

Read More