ನೋಡದೊ ಹರಿದೋಡುತಲಿದೆ ನದಿ ವಾರಿಧಿಗೆ ಮಾನವನೇ ! ಗುರುವಹುದದು ಜೀವನಝರಿಗೆ || ಪ || ಪಥಕೆದುರಾಗುವ ಪರ್ವತಪಂಕ್ತಿಯ ಕೊರೆದು ಸಂಕಟಗಳ ಸೀಳುತ ಹೊಸದಾರಿಯ ತೆರೆದು ಚಿಮ್ಮುವ ಧಾರೆಯ ಬಲುಮೆಯ ನೋಡದೊ ನೋಡು ಹಿಂಬಾಲಿಸು, ನಿನ್ನೀ ಜೀವನಕದೆ ಜಾಡು || 1 || ಸುಗುಣದ ಸುರಸುಂದರ ಹೂಬನಗಳ ಬೆಳೆಸಿ ತಪದಾಗರ ಗಿರಿಕಂದರ ಗವಿಗಳ ಬಳಸಿ ಅಜರಾಮರ ಆದರ್ಶದ ಸಾಧನೆಗೆಳೆಸಿ ಜೀವನಝರಿ ಹರಿದೋಡಲಿ ಕಲುಷವನಳಿಸಿ || 2 || ಬಾಳುದ್ದದ ಸೋಪಾನಕೆ ಜನರನು ಕರೆದು ಚಣನಿಲ್ಲದೆ ಮುಂಬರಿಯುವ ನೀತಿಯನೊರೆದು ಸ್ನೇಹದ […]