ಹಿಂದೂರಾಷ್ಟ್ರದ ಪರಮ ವೈಭವದ ಸಾಧನಮಾರ್ಗದಲೀss ನವಚೈತನ್ಯದ ನವತೇಜಸ್ಸಿನ ಶಕ್ತಿಯು ಇಹುದಿಲ್ಲೀss || ಪ || ನವೋತ್ಸಾಹ ನವಿರೇಳುತಿದೆ ಹಿಂದು ಭೂಮಿಯಾ ಕಣಕಣದಲ್ಲಿ ಸಹಸ್ರವರ್ಷದ ದೌಭಾಗ್ಯದ ಕಲೆ ಅಳಿಯುವುದು ಜನಮನದಲ್ಲಿ ಹಿಂದು ಸಮಾಜವು ವಿರಾಟಶಕ್ತಿಯ ಶೀಘ್ರದಿ ಮೆರೆವುದು ಜಗದಲ್ಲಿ ಚೇತನರೂಪಿ ಭಗವಾಧ್ವಜವು ಹಾರುವುದು ಪ್ರತಿ ಊರಲ್ಲಿ || 1 || ಸಾಧು ಸಂತರು ಹೊರಟಿಹರಿಂದು ಹಿಂದು ಚೇತನವ ಬಡಿದೆಬ್ಬಿಸಲು ತರುಣ ಕೋಟಿಯು ಕಂಕಣಬದ್ಧರು ಪರಮವೈಭವದ ರಾಷ್ಟ್ರಕಟ್ಟಲು ಜನಸಾಗರವು ಉಕ್ಕಿ ಹರಿವುದು ಸಮಾಜದೇಕತೆ ನಭಕೆ ಸಾರಲು ಬಡವ ಬಲ್ಲಿದ ಪಂಡಿತ […]