ಮಾತು ಮಾಗಲಿ ಭಾಷೆ ಬೆಳೆಯಲಿ

ಮಾತು ಮಾಗಲಿ ಭಾಷೆ ಬೆಳೆಯಲಿ ಹೃದಯ ಪಕ್ವತೆ ಪಡೆಯಲಿ ಭಾರತಾಂಬೆಯ ಕೀರ್ತಿ ಬೆಳಗಲಿ ಸೂರ್ಯ ಕಿರಣದ ತೆರದಲಿ || ಪ || ಧ್ವಜವು ಹಾರಲಿ ಮೇಲಕೇರಲಿ ನಾಡಹಿರಿಮೆಯ ಸಾರಲಿ ಜನರು ಸಮರಸ ಗೀತೆ ಹಾಡಲಿ ಐಕ್ಯ ಭಾವವು ಮೂಡಲಿ || 1 || ಮಕ್ಕಳೆಲ್ಲರು ಒಂದುಗೂಡಲಿ ಭಾರತಾಂಬೆಯ ಭಜಿಸಲಿ ಪ್ರೀತಿ ಪ್ರೇಮದ ಒರತೆ ಹರಿಯಲಿ ಬಂಧು ಭಾವವ ಬೆಸೆಯಲಿ || 2 || ಧರ್ಮರಕ್ಷಣೆಯಾಗಿ ಭಾರತ ವಿಶ್ವಗುರು ತಾನಾಗಲಿ ರಾಷ್ಟ್ರಭಕ್ತಿಯ ದಿವ್ಯ ಶಕ್ತಿಯು ಜಗಕೆ ಮಾರ್ಗವ ತೋರಲಿ […]

Read More