ವಿಸ್ಮೃತಿಯ ಕಾರಿರುಳು ಭಾರತವ ಮುಸುಕಿರಲು ಅಲ್ಲಿ ಮೂಡಿತು ಒಂದು ಬೆಳ್ಳಿ ಕಿರಣ || ಪ || ನಂಬಿಕೆಯ ಚಿತ್ತಾರ ಗಗನಂಗಣದಿ ಬಿಡಿಸಿ ತುಂಬಿಸಿತು ಹೊಂಬೆಳಕು ಅರುಣ ವರ್ಣ || 1 || ಸಂಘ ಸೂರ್ಯನು ಉದಿಸೆ ಸಂಘಟಿಸೆ ಸಮರಸತೆ ಹಿಂದು ಮನದಂಗಳದಿ ರಂಗವಲ್ಲಿ || 2 || ಅಸಮತೆಯ ಭಾರದಲಿ ಬಸವಳಿದ ಭಾರತಿಗೆ ಏಕರಸಧಾರೆಯಲ್ಲಿ ಕಾಯಕಲ್ಪ || 3 ||
ತರುಣರೆಲ್ಲ ಒಂದು ಗೂಡಿ ತಂಡ ಕಟ್ಟೋಣ ಗ್ರಾಮದಲ್ಲಿ ರಾಮರಾಜ್ಯ ಕನಸು ಬಿತ್ತೋಣ ತಂಡ ಕಟ್ಟೋಣ ನಾವು ಕನಸು ಬಿತ್ತೋಣ ಸ್ವಾಭಿಮಾನ ಪೂರ್ಣ ಭವ್ಯ ರಾಷ್ಟ್ರ ಕಟ್ಟೋಣ || ಪ || ಜಲಮೂಲವ ನದಿಕೆರೆಗಳ ಕಲುಷಗೊಳಿಸದೆ ನೆಲದೊಡತಿಗೆ ಹಸಿರು ಬಣ್ಣ ದುಡುಗೆ ನೀಡೋಣ ರಸಗೊಬ್ಬರ ಹೆಸರಿನಲ್ಲಿ ವಿಷವನುಣಿಸದೆ ಸಾವಯವದ ಸ್ವಾವಲಂಬಿ ಕೃಷಿಯ ಮಾಡೋಣ || 1 || ಎಳೆಮನದಲಿ ನೆಲದೊಲವಿನ ಬೀಜಬಿತ್ತೋಣ ಯುವಜನರಲಿ ಛಲತುಂಬುತ ಗೆಲುವ ಗಳಿಸೋಣ ಜಾತಿ ದ್ವೇಷ ಭೇದಭಾವ ದೂರ ಗೊಳಿಸುತ ಬಂಧುತ್ವದ ಸವಿ ಅಮೃತ […]
ಒಂದುಗೂಡಿ ಬಾಳುವಾ ಸನ್ಮಾರ್ಗದಲ್ಲೇ ನಡೆಯುವಾ ಶಕ್ತಿ ಮೀರಿ ನಾವು ಸತ್ಕಾರ್ಯವನ್ನೇ ಮಾಡುವಾ || ಪ || ಯುಗದ ಜೊತೆಗೆ ಹೆಜ್ಜೆ ಹಾಕಿ ಮುನ್ನುಗ್ಗಲರಿಯುವಾ ಒಂದೇ ಸ್ವರದಲ್ಲಿ ಹಾಡ ಅನುರಣಿಸಲು ಕಲಿಯುವಾ ಮರೆತು ಕೂಡ ಜಾತಿ ಪಂಥ ಎಂಬ ಮಾತನಾಡಬೇಡಿ ಭಾಷೆ ಪ್ರಾಂತಕಾಗಿ ಎಂದೂ ರಕ್ತಪಾತ ಮಾಡಬೇಡಿ ದುಷ್ಟ ಶಕ್ತಿ ಹೆಚ್ಚುತಿದೆ ಬಗ್ಗು ಬಡಿದು ಮುಂದೆ ಸಾಗಿ || ಶಕ್ತಿ ಮೀರಿ || ಹತ್ತು ದಿಕ್ಕಿನಿಂದ ಇಂದು ಕೇಳಿಬರುತ್ತಿರುವ ಕೂಗು ಸಾಟಿಯಿಲ್ಲ ಮಾತೃ ಋಣಕೆ ಇಡಬೇಕು ಬಾಳ ಮುಡಿಪು […]
ಒಂದುಗೂಡಿ ಬನ್ನಿ ನಾಡಸೇವೆಗೆ ಶುದ್ಧಮನದಿ ಶ್ರದ್ಧೆಯಿಂದ ಗೈವಪೂಜೆಗೆ ಬದ್ಧರಾಗಿ ದಿವ್ಯಧ್ಯೇಯ ಆದರ್ಶಕೆ ಸಿದ್ಧರಾಗಿ ಸರ್ವಸ್ವ ನೈವೇದ್ಯಕೆ || ಪ || ನಮ್ಮ ಬೆವರು ರಕ್ತವ ತೈಲದಂತೆ ಎರೆಯುವಾ ನಾಡಗುಡಿಯ ಬೆಳಗಲು ಬತ್ತಿಯಂತೆ ಉರಿಯುವಾ ಕತ್ತಲನ್ನು ಕರಗಿಸಿ, ಸುತ್ತ ಬೆಳಕ ಮೂಡಿಸಿ ಮನದಿ ಮನೆಯ ಮಾಡಿದಂಥ ಮೌಢ್ಯವನ್ನು ತೊಲಗಿಸಿ || 1 || ಸುಮ್ಮನಿರದೆ ಕಾರ್ಯಕಾಗಿ ಸತತಕಾಯ ಸವೆಸುವಾ ಹೆಮ್ಮೆಯಿಂದ ಒಮ್ಮನದಲಿ ಗುರಿಯ ಕಡೆಗೆ ಚಲಿಸುವಾ ಸೋಲಿನಿಂದ ಕುಗ್ಗದೆ ಸವಾಲುಗಳಿಗೆ ಜಗ್ಗದೆ ವಿರೋಧಕೆಂದೂ ಬಗ್ಗದಂಥ ಗಟ್ಟಿತನವ ಗಳಿಸುವಾ || […]
ಒಂದು ದಿನ ಸಂಜೆಯ ಸಮಯ ತಿರುಗಾಡಲು ಹೊರಟಾಗ ಕಂಡೆನು ನಾ ಮನವನು ಸೆಳೆವ ಸುಂದರ ದೃಶ್ಯವನೊಂದ || ಪ || ಮಾರ್ಗದ ಬದಿಯಲಿ ಬಯಲು, ಆ ಬಯಲಲಿ ಮಕ್ಕಳ ಹುಯಿಲು ಮಕ್ಕಳಿಗೆಲ್ಲಾ ಮುಖ್ಯನು ಒಬ್ಬ, ಗರ್ಜಿಸಿತವನಾ ಬಿಗಿಲು ಟಿರ್ರ್ ಟ್ರಿಕ್… ಟಿರ್ರ್ ಟ್ರಿಕ್ …. ತತ್ತರಿಸಿತು ಆ ಮುಗಿಲು || 1 || ದಕ್ಷ ಆರಮ ಆಜ್ಞೆ, ಅದು ಶಿಸ್ತಿಗೆ ಸೂಚಕ ಸಂಜ್ಞೆ ಸಂಜ್ಞೆಯನರಿತು ಸಾಗಿತು ಮುಂದೆ, ತರುಣರ ಬಾಲರ ಸೇನೆ ಏಕ್-ದೋ-ಏಕ್-ದೋ, ಏಕ್-ದೋ-ಏಕ್-ದೋ, ಸಂಪತಗೊಂಡಿತು ತಾನೇ […]