ಜೋ…..ಜೋಜೋಜೋ……. ಜೋಜೋ…….ಜೋಜೋಜೋ……… || ಪ || ಉಣ್ಣುವ ಅನ್ನಕೂ ಪಾವನ ಮಣ್ಣಿಗೂ ನಿತ್ಯ ನಮಿಸಬೇಕು ಮಗುವೇ ನಿತ್ಯ ನಮಿಸಬೇಕು.. || 1 || ನಂಬಿದ ದೇವರ ಬಿಂಬದ ಇದಿರು ಹಣತೆ ಹಚ್ಚಬೇಕು ಮಗುವೇ ಹಣತೆ ಹಚ್ಚಬೇಕು.. || 2 || ಗತ ಇತಿಹಾಸದ ಪುಟಗಳ ತಿರುವಲು ಬೆಳೆಯಬೇಕು ಮಗುವೇ ನೀನು ಬೆಳೆಯಬೇಕು.. || 3 || ಸ್ವಾತಂತ್ರ್ಯಕಾಗಿ ಮಡಿದ ಕಲಿಗಳ ಕಥೆಯ ಓದಬೇಕು ಮಗುವೇ ಕಥೆಯ ಓದಬೇಕು.. || 4 || […]