ದಶದಿಶೆಯೊಳು ಆವರಿಸಿದೆ ನಿಶೆಯಿದು ಉಷೆಯುದಿಸುತಲೇ ನಶಿಸುತಿದೆ ದೇಶದ ದೆಸೆಯನು ಬದಲಾಯಿಸುವ ಕೇಶವನಾಸೆಯು ಫಲಿಸುತಿದೆ || ಪ || ಯೋಗದ ಯಾಗದ ಪ್ರಯೋಗಗಳಲಿ ಜಗದ ಜನತೆಗೂ ಸಹ ಯೋಗ ಯುಗಸಂಕ್ರಮಣದ ಶುಭ ಸಂಧಿಯಲಿ ಸಂಘದ ಗಂಗೆಯ ವಿನಿಯೋಗ || 1 || ಪರಮಾರ್ಥದ ಪರಮಾಣುವ ಶೋಧನೆ ಭಾರತವಿಂದು ಅಗ್ರಣಿಯು ತತ್ವದ ಸತ್ವದ ಸತ್ಯಾನ್ವೇಷಣೆ ಬೆಳಗಿದ ಭಾರತ ದಿನಮಣಿಯು || 2 || ಅಭ್ಯುದಯದ ಜತೆ ನಿಃಶ್ರೇಯಸ್ಸಿನ ಸಾಧನೆ ಭಾರತದಾಶಯವು ಜಗದ ಜನರ ಜತೆಗೆ ಮೃಗ ಖಗ ಸಂಕುಲ ಸಕಲರ […]