ಅಮೂರ್ತ ಮೂರ್ತ ಮೂರ್ತಿಮಂತ ನಿನ್ನೊಲು ನಾವಾಗಲಿ ನಿನ್ನ ನಡೆಯ ನೆಲೆಯನಾಂತು ದೇಶಕಾರ್ಯ ತೊಡಗಲಿ || ಪ || ಮೊಗ್ಗು ಮೊಗವು ಬಿರಿಬಿರಿಯೆ ಹಿಡಿಹೂಗಳು ತಾವರಳಲಿ ದಿವ್ಯಗಂಧವೆಲ್ಲ ಹರಡಿ ಅವನಿಯು ಪರಿಮಳಿಸಲಿ || 1 || ಪುಷ್ಪಫಲದ ವಾಂಛೆಯಳಿದು ಸಮರ್ಪಣೆಯ ಭಾವ ತಳೆದು ಧ್ಯೇಯದೇವನೆದುರಿನಲ್ಲಿ ಸ್ವಾರ್ಥ ಹೋಮವಾಗಲಿ || 2 || ಲೋಕಸೇವಾ ಭಕ್ತಿ ಭಾವ ಎಂಬುದೊಂದೇ ಧ್ಯೇಯ ದೇವ ನಿರತ ಪೂಜೆಯಿಂದ ದೇವ ನಿನ್ನ ರೂಪ ದೊರೆಯಲಿ || 3 || ದಿವ್ಯ ಭವ್ಯ ರಾಷ್ಟ್ರಜ್ಯೋತಿ ನಿನ್ನ […]