ಅತಿಶಯದ ಮಾತಲ್ಲ ಯುಗಪುರುಷ ನಿನ್ನೊಳಿದೋ ಭಾವ ನೈವೇದ್ಯಗಳ ಅರ್ಪಿಸುತಿಹೆ ನಿನ್ನ ನಡೆಗಳ ಕಲಿಸು ನಿನ್ನ ನುಡಿಗಳನುಲಿಸು ಧನ್ಯ ಜೀವನಕಾಗಿ ಪ್ರಾರ್ಥಿಸುತಿಹೆ || ಪ || ಹಿಂದು ರಾಷ್ಟ್ರದ ಋಷಿಯ ದೃಷ್ಟಿ ಸಿಂಚಿಸಿತು ರಾಷ್ಟ್ರಭಕ್ತಿಯ ಅಮೃತ ವೃಷ್ಟಿ ದಾಸ್ಯಗಳ ಧಿಕ್ಕರಿಸಿ, ಸ್ವತ್ವಗಳ ವಿಸ್ತರಿಸಿ ಸೂಸಿದೆ ಸನಾತನದ ಸೃಷ್ಟಿ ದೊರೆತಿದೆ ಪುರಾತನದ ಪುಷ್ಟಿ || 1 || ಋತು ಚಕ್ರವುರುಳುತಿರೆ ಜೋಕೆ | ಕ್ಷಣ ಕ್ಷಣವು ಫಲಿಸುತಿದೆ ಯುಗಯುಗದ ಹರಕೆ ಹಿಂದುತ್ವ ಚೈತನ್ಯ | ರಾಷ್ಟ್ರದೇಹದಿ ನೆಲೆಸಿ ಮೀಟುತಿದೆ ನಾಡಿನಾಡಿಗಳ […]