ನಿನ್ನೊಲವಿನಲಿ ನಲಿವ ಭಾಗ್ಯವೆಮ್ಮದು ತಾಯೆ ಬಣ್ಣನೆಗೆ ನಿಲುಕದಿಹ ಭವ್ಯ ಸಂಸ್ಕೃತಿ ಪ್ರಭೆಯೆ || ಪ || ಸರ್ವರಲು ಸಮಭಾವ ಹಿಂದುತ್ವದೌನ್ನತ್ಯ ಅಸ್ಮಿತೆಗೆ ಕುಂದಿರದ ಸ್ವಂತಿಕೆಯ ಸಾಂಗತ್ಯ ವಿಧವಿಧದ ಭಾಷೆಮತ ಒಮ್ಮತದ ವೈವಿಧ್ಯ ತ್ಯಾಗದೆಲೆ ಅತಿಹಿತವು ಜಗದಗಲ ಬಾಂಧವ್ಯ || 1 || ಅತಿಸಹನೆ ಒಳಿತಲ್ಲ ಸ್ವಾಭಿಮಾನಕೆ ಧಕ್ಕೆ ಜನನಿಯಾದೆಯೆ ದುರ್ಗೆ ದುಷ್ಟ ಸಂಹಾರಿಣಿಯೆ ಮರೆತುಬಿಟ್ಟೆವು ಚರಿತೆ ಮನ್ನಿಸೆಮ್ಮನು ತಾಯೆ ಪಾಪಿಗಳ ದುಷ್ಕೃತಿಯು ಸುತರಿಗಿಲ್ಲವೆ ನೆಲೆಯೆ || 2 || ದೋಷಗಳನರಿತಿಹೆವು ಎಚ್ಚರಾಗಿಹೆವಿಂದು ಹಿಂದುಪಡೆ ಭೊರ್ಗೆರೆವ ಶರಧಿಯಾಗಿಹುದಿಂದು ಸ್ವಾರ್ಥ […]