ಅಂತ್ಯವಿಲ್ಲದ ಸಂತ ನಿನ್ನಯ ಚಿಂತನೆಯದು ಚಿರಂತನ ಅಖಿಲವಿಶ್ವದ ಸಕಲ ಮನುಕುಲ ನೀಡಿತದಕೆ ಸ್ಪಂದನ ನಿನ್ನಡಿಗೆ ಶತವಂದನ || ಪ || ವೇಷಭೂಷಣ ಸಡಿಲ ಸರಳ ಧ್ಯೇಯನಿಷ್ಠೆಯು ಮಾತ್ರ ಅಚಲ ತನ್ನ ಮೋಕ್ಷದ ವಾಂಛೆ ತ್ಯಜಿಸಿ ಗೈದ ಕಾರ್ಯ ಅಗಾಧ ಅತುಲ || 1 || ಭರತಭೂಮಿಯ ಅಗಲ ಉದ್ದಕು ಚಲಿಸಿದ ಪರಿವ್ರಾಜಕ ಸಾಧಕರ ಸಂತತಿಯ ಬೆಳೆಸಿದ ಸಂತ ಜನರಧಿನಾಯಕ || 2 || ಯತಿಯೆ ನಿನ್ನಯ ಸ್ಮೃತಿಯು ನಮಗೆ ರಾಷ್ಟ್ರಕಾರ್ಯಕೆ ಪ್ರೇರಣೆ ನೀನು ತೋರಿದ ಪಥದಿ ಚಲಿಸಿ […]
ಜಯಜಯ ಅಭಿನವ ಋಷಿವರ ಮಾಧವ ನಿನ್ನಯ ಚರಣಕೆ ನಮೋ ನಮೋ || ಪ || ಜನ್ಮಜಾತ ಅನುಪಮ ಪ್ರತಿಭಾನ್ವಿತ ಧೀಮಂತಿಕೆಯ ಪ್ರತಿರೂಪ ಪೂರ್ಣ ಜೀವನವ ಮುಡಿಪಾಗಿರಿಸಿದೆ ಅಳಿಸಲು ಮಾತೆಯ ಸಂತಾಪ || 1 || ಭುಜಗಳ ಗಡಿಯನು ದಾಟಿದ ಸೊಂಪಿನ ಕೇಶರಾಶಿಯ ಲಾಸ್ಯದಲಿ ದೇಶವಿದಕೆ ಹೊಸ ದಿಶೆಯನು ತೋರಿದೆ ಹಿಂದುತ್ವದ ನವಭಾಷ್ಯದಲಿ || 2 || ಸರಳ ಜೀವನ ಉದಾತ್ತ ಚಿಂತನ ನಿನ್ನಯ ಬಾಳ ವಿಶೇಷತೆಯು ನವಭಾರತ ನಿರ್ಮಾಣದ ಕಾರ್ಯದಿ ಸಾಧಕ ಜನಕದು ಪ್ರೇರಣೆಯು || 3 […]
ಮಾಧವ ನಿನ್ನಯ ಆದರ್ಶಗಳೆ ಬಾಳಿಗೆ ಸೋಪಾನ ಭೇದವ ಮರೆಸುವ ಆದೇಶಗಳೆ ಸ್ಫೂರ್ತಿಯ ಸಂಚಲನ ಸಾಧನೆ ತೋರಿ ಮಾಡಿದೆಯಂದು ಸಂತರ ಸಮ್ಮಿಲನ ಸಾಧಕ ಪುರುಷನೆ ಯುಗ ದ್ರಷ್ಟಾರನೆ ಗೈವೆವು ಶತನಮನ || ಪ || ಕೇಶವ ನೆಟ್ಟಿಹ ವೃಕ್ಷದ ಪಾಲನೆ ಪೋಷಣೆ ನೀ ಗೈದೆ ಕ್ಲೇಶವನೆಣಿಸದೆ ಸಂಘದ ಕಾರ್ಯಕ್ಕೆ ರಭಸವ ನೀ ತಂದೆ ಶೋಷಿತ ಜನತೆಗೆ ಪ್ರೀತಿಯ ಸುಧೆಯನು ಅನುದಿನ ನೀನೆರೆದೆ ಆಸರೆ ನೀಡುತ ವನವಾಸಿಗಳ ಬಾಳಿಗೆ ಬೆಳಕಾದೆ || 1 || ಅಮ್ಮನ ಮರೆಯುವ ನಮ್ಮಯ ತರುಣರ […]
ಭಾರತಿ ನಿನ್ನಯ ಅಡಿಗಳಿಗೆ ಪೊಡಮಡುವೆ ನಾ ಅಡಿಗಡಿಗೆ ಜನನಿ ಓ ಜನನೀ ಜನನಿ ಜನ್ಮಭೂಮಿ || ಪ || ಜನ್ಮ ಜನ್ಮದಾ ಪುಣ್ಯದ ಫಲವು ಕರುಣೆಯ ತೋರಿದ ಒಲವಿನ ಬಲವು ಬಂದಿಹೆ ಧರೆಗೆ ನಿನ್ನೊಡಲೊಳಗೆ ಕೋಟಿ ಕೋಟಿ ಜನ ಸೋದರರೆನಗೆ || 1 || ಮೇಲೆ ಹಿಮಾಚಲ ಕಾಲಡಿ ಕಡಲು ಬಂಗಾರದ ನಿಧಿ ತುಂಬಿದ ಒಡಲು ಶ್ರೀಗಂಧದ ಸೌಗಂಧವು ತುಂಬ ಏನೆಂಬೆನು ನೀ ಸ್ವರ್ಗದ ಬಿಂಬ! || 2 || ಉಜ್ವಲ ಕಲೆ ಸಂಸ್ಕೃತಿಗಳ ನಾಡು ಕೆಚ್ಚೆದೆ […]
ಅರ್ಪಿಸುತಿಹೆವೀ ಸೌಧವನಿಂದು ಸಾಧಕ ನಿನ್ನಯ ಪಾವನ ಸ್ಮೃತಿಗೆ ತನುಮನಧನ ಜೀವನವ ಸಮರ್ಪಿಸಿ ಅಭಿನವ ಭಾರತ ಕಟ್ಟುವ ಕೃತಿಗೆ ಸೇವೆಯ ಸುಮಧುರ ಸಂಸ್ಕೃತಿಗೆ || ಪ || ದೃಢಸಂಕಲ್ಪದ ಇಟ್ಟಿಗೆಯಿಂದ ಕಟ್ಟಿದ ಸುದೃಢ ಭವನವಿದು ಸಾಸಿರ ಹೃದಯದ ಸಾಗರ ಮಥನದಿ ಹೊಮ್ಮಿದ ಅಮೃತಕಲಶವಿದು ಸೇವೆಯ ಸುಧೆಯನು ಉಣಿಸುವೆವಿಂದು ಬಾಯಾರಿದ ಹತಭಾಗ್ಯ ಜನತೆಗೆ ತನು ಮನ ಧನ … || 1 || ನಿನ್ನಯ ಘನ ಆದರ್ಶದ ಬದುಕಿನ ಸಾಹಸಗಾಥೆಯ ಪುಟಪುಟವೂ ಜಡತೆಯ ನೀಗಿಸಿ ಸ್ಫೂರ್ತಿಯ ನೀಡಿದೆ ಧ್ಯೇಯಮಾರ್ಗದಲಿ ಕ್ಷಣಕ್ಷಣವೂ […]
ಬೆಳೆಯಿಸು ನಿನ್ನಯ ವಾಮನ ಗಾತ್ರ ವಹಿಸು ತ್ರಿವಿಕ್ರಮ ಈ ಪಾತ್ರ……. || ಪ || ಅಂಧಕಾರದಲಿ ಮುಳುಗಿದ ವಿಶ್ವಕೆ ಬೆಳಕಿನ ನಿಧಿಯು ನೀ ಮಾತ್ರ ಭಾರತ ಮಾತೆಯ ವರಪುತ್ರ || ಅಪ || ಹರಿಹರ ಬ್ರಹ್ಮರ ಅಂಶಜ ನೀನು, ನೀ ನಿಜ ತ್ರಿಭುವನ ಸಂಚಾರಿ ರುದ್ರ ತ್ರಿಶೂಲದ ಘನ ಕೋದಂಡದ, ಚಕ್ರ ಸುದರ್ಶನದಧಿಕಾರಿ ಅನುಪಮ ಶಕ್ತಿಯ ಅವತಾರಿ || 1 || ಕಲಿಯುಗದಲಿ ತಲೆ ಎತ್ತಿದ ಬಲಿಗಳ ನೆತ್ತಿಯನೊತ್ತಿ ರಸಾತಳಕೆ ಬೆಳೆಯಿಸು ತವ ಪಾದಂಗಳ ಮಂಗಳಲೋಕದ ಆಚೆಯ […]
ಇಂದು ನಿನ್ನಯ ಸರ್ವ ದೇವರು ಹಿಂದು ಹೆಸರಿನ ಬಂಧು ಜನರು || ಪ || ಚರಿತೆ ಮರೆಯುತಲಂಧರಾಗಿಹ ಅವರೆ ಇಂದಿನ ಮಾತ ಪಿತರು ಸ್ವಾರ್ಥ ಕಲಹದಿ ರಾಷ್ಟ್ರ ಮರೆಯುತ ಪೂರ್ಣ ವೈಭವದಿಂದಲುರುಳಿ ಕಣ್ಣ ತೆರೆಸುವ ನೀತಿ ಕಲಿಸುವ ಜ್ವಾನದಾತರು ಗುರುವರ್ಯರು ಕಣ್ಗೆ ಕಾಣುವುದೊಂದೆ ದೇವರು ಭವ್ಯ ಜಾತಿಯ ದಿವ್ಯ ನರರು || 1 || ಶಾಲಿವಾಹನ ಶ್ವೇತವಾಹನ ಭೀಮ ಭೀಷ್ಮರ ಸಂಜಾತರು ಬಾಣ ಚದುರರ ದಾನಶೂರರ ದ್ರೋಣ ಕರ್ಣರ ಸಂತಾನರು ಪತಿತ ಪಾಮರ ದೀನ ಹೀನರ ನಿನ್ನ […]