ಶ್ರೀಗಂಧ ನಾನಾಗಿ ಹುಟ್ಟುತ್ತಿದ್ದರೆ ಆಗ

ಶ್ರೀಗಂಧ ನಾನಾಗಿ ಹುಟ್ಟುತ್ತಿದ್ದರೆ ಆಗ ನಿನ್ನ ಪಾದಾರ್ಚನೆಗೆ ಸವೆಯುತಿದ್ದೆ ಗಿಡದಲ್ಲಿ ಹೂವಾಗಿ ಹುಟ್ಟುತ್ತಿದ್ದರೆ ಆಗ ಪಾದ ಪೂಜೆಯ ಸಮಯ ಬಳಿ ಸೇರುತಿದ್ದೆ || ಪ || ನಿನ್ನ ಭಜಿಸುವ ದುಂಬಿ ನಾನಾಗಿ ಜನಿಸಿದರೆ ಪದಕಮಲ ಮಕರಂದ ಹೀರುತಿದ್ದೆ ನೀ ನಡೆವ ಮಾರ್ಗದಲಿ ನಾನು ಜನಿಸಿದರಾಗ ನಿನ್ನ ಪದ ಧೂಳಿಯಲಿ ಹೊರಳಾಡುತಿದ್ದೆ || 1 || ಯಾವೊಂದು ನದಿಯಲ್ಲಿ ನೀರಾಗಿ ಜನಿಸಿದರೆ ನಿನ್ನ ಪದ ತೊಳೆವಲ್ಲಿ ನಾನೊದಗುತಿದ್ದೆ ನಿನ್ನ ನಿಜ ಭಕ್ತನು ನಾನಾಗಿ ಜನಿಸಿದರೆ ನಿನ್ನ ಪದಕಮಲದಲಿ ಮೈಮರೆಯುತಿದ್ದೆ […]

Read More

ದೇವಿ ಭಾರತಿ ನಿನ್ನ ಸಮರನು

ದೇವಿ ಭಾರತಿ ನಿನ್ನ ಸಮರನು ಕಾಣೆವೈ ಈ ಜಗದಲಿ ದೇವ ರಾಮನು ಸೀತ ಮಾತೆಯು ಬೆಳದರೈ ನಿನ ಮಡಿಲಲಿ || ಪ || ಪೂರ್ವ ಪಶ್ಚಿಮ ದಕ್ಷಿಣೋತ್ತರ ಹಬ್ಬಿದೇ ನಿನ್ನ ಕೀರುತಿ ಸಾರ್ವ ಭೌಮಿಯು ಸಪ್ತ ಲೋಕದಿ ನೀನೆ ಮಂಗಳೆ ಭಾರತಿ || 1 || ಗಂಗೆ ಯಮುನಾ ಸಿಂಧು ಸರಸ್ವತಿ ಇವರೆ ನಿನ್ನಯ ಕಂಗಳು ತುಂಗ ಭದ್ರ ಕಾವೇರಿ ಭೀಮರು ಚರಣ ತೊಳೆಯುವ ಮಕ್ಕಳು || 2 || ಚಂದ್ರ ಶೇಖರ ಭಗತ್ ಸಿಂಗರು ಭೋಸು […]

Read More

ನಿನ್ನರುಣ ಕಿರಣಗಳು

ನಿನ್ನರುಣ ಕಿರಣಗಳು ನಿನ್ನ ಶುಭಕರ ಬೆಳಕು ನನ್ನ ಧೀಯನು ಬಳಸಿ ಬೆಳಗೆ ಬರಲಿ       || ಪ || ನಿನ್ನ ಸರ್ವಾತ್ಮದಲಿ ನನ್ನನರಿವಂದದಲಿ ನನ್ನ ಹೃದಯವ ಹಿರಿದು ಮಾಡೆಬರಲಿ     || 1 || ಭೇದವೇ ನಿನಗಿಲ್ಲ ಶತ್ರು ಮಿತ್ರರು ಮಿಲ್ಲ ಒಳಿತು ಕೆಡುಕನು ದಾಟಿದಿರವು ನಿನದು    || 2 || ನಾನು ನಿನ್ನಂತಾಗಿ ನಿನ್ನೊಳೈಕ್ಯನೇ ಆಗಿ ನಿನ್ನಿರವಲೇ ಜಗವನರಿವುದೆಂದು          || 3 ||

Read More

ತಾಯೇ ನಿನ್ನ ಉದರದಲ್ಲಿ ಜನಿಸಿ ಧನ್ಯನಾದೆನು ನಾನು 

ತಾಯೇ ನಿನ್ನ ಉದರದಲ್ಲಿ ಜನಿಸಿ ಧನ್ಯನಾದೆನು ನಾನು ಹೇ ವತ್ಸಲೇ ಹೇ ದುರ್ಗಾಮಾತೆ ಮಂಗಲದಾತೆ ಪರಮಪುನೀತೆ ಪುಣ್ಯವಂತೆ ಕರ್ತವ್ಯನಿರತೆ ಓಂ ನಮಸ್ತೇ ಶ್ರೀ ನಮಸ್ತೇ                 || ಪ || ಹಿಂದೂರಾಷ್ಟ್ರದ ಅವಯವಗಳು ನಾವು ಆದರದಿಂದಲಿ ಪೂಜಿಸುವ ನಾವು ನಿನ್ನಯ ಸೇವೆಗೆ ಬದ್ಧರು ನಾವು ಆಶೀರ್ವಾದವ ಕೋರುವ ನಾವು            || 1 || ವಿಶ್ವವೇ  ಜಯಿಸದ ಶಕ್ತಿಯ ನೀಡೆ ಜ್ಞಾನದ ನೆರಳ ವಿವೇಕವ ನೀಡೆ || ಜಗವೇ ನಮಿಸುವ ಶೀಲವ ನೀಡೆ ಕಂಟಕ ಅಳಿಸುವ ಜ್ಞಾನವ ನೀಡೆ          || […]

Read More

ಧ್ಯೇಯ ಶಿಖರವೇರಲು ಕಾಯಲೇಕೆ ಸಾಧಕ

ಧ್ಯೇಯ ಶಿಖರವೇರಲು ಕಾಯಲೇಕೆ ಸಾಧಕ ಸಾಧಿಸುವುದು ನಿನ್ನ ಕಾಯಕ ಎತ್ತರ ಎತ್ತರ ಇನ್ನು ಎತ್ತರ ಕೆಚ್ಚೆದೆಯ ಸಾಧನೆಯೇ ನಿನ್ನ ಉತ್ತರ ಉತ್ತರ ಉತ್ತರ ಒಂದೇ ಉತ್ತರ || ಪ || ಕವಿದ ಕಾರ್ಮೋಡವೆಂದೂ ಉಳಿಯುವುದೇ ಅನುದಿನ ಭವದ ಆಸೆ ಆಕಾಂಕ್ಷೆ ತೊರೆದು ಬಿಡು ಈ ಕ್ಷಣ ಬಾಳ ಬವಣೆ ಕಳೆದು ಸಂಘ ಸೂತ್ರ ಹಿಡಿದು ಸೋಲಿಗೆದುರು ನಿಲ್ಲುವುದೇ ನಿನ್ನ ಉತ್ತರ || 1 || ಸುತ್ತುವರಿದ ಮೌಢ್ಯತೆಯ ಸುತ್ತ ಯುದ್ಧವಾಡುತ ಸತ್ವಭರಿತ ಕಾರ್ಯ ತತ್ವ ಎಂಬ ಅಸ್ತ್ರ […]

Read More

ಜನತಾ ರೂಪಿ ಜನಾರ್ದನ

ಜನತಾ ರೂಪಿ ಜನಾರ್ದನ ನಿನ್ನ ಸೇವೆಯಗೈವೆನು ಅನುದಿನ ನಿನ್ನಯ ಶ್ರೀಪಾದಂಗಳಿಗರ್ಪಿತ ತನುಮನಧನ ವಿಜ್ಜೀವನ || ಪ || ಕೋಟಿ ಶರೀರದ ಕೋಟಿ ಮುಖಗಳಿಂ ಕೋಟಿ ಕೋಟಿ ಕರಚರಣಗಳಿಂದ ಕಂಗೊಳಿಸುವ ತವ ಭದ್ರ ಸ್ವರೂಪಕೆ ಶಿರ ಬಾಗುವೆನು ಆದರದಿಂದ || 1 || ವಿಭಜಿತ ಭಾವದ ವಿವಿಧ ಸ್ವಭಾವದ ನಿನ್ನ ಪ್ರಭಾವಕೆ ಒಳಗಾಗಿಹೆವು ವಿವಿಧತೆಯಲ್ಲಿಹ ಐಕ್ಯದ ಶಕ್ತಿಗೆ ಭಕ್ತಿಯಿಂದಲಿ ಶರಣಾಗಿಹೆವು || 2 || ಕ್ಷಣಿಕರು ನಾವು ಶಾಶ್ವತ ನೀನು ಸೃಷ್ಟಿಪ್ರಲಯ ಪರ್ಯಂತ ಅಮರನು ನಿನ್ನಯ ಸೇವೆಗೆ ಬದ್ಧರು […]

Read More