ದೇಶದುನ್ನತಿ ಅಲ್ಲಿ ನೆಲೆಸುವ ಜನರ ಶ್ರದ್ಧೆಯ ಬಯಸಿದೆ ದೇಶಸೇವೆಯೆ ಈಶ ಸೇವೆಯು ಎನುವ ಮನಗಳ ಕರೆದಿದೆ || ಪ || ಹುಲ್ಲು ಬೇರದು ನೀರು ನಿಲುಕಿದ- ರಲ್ಲೆ ಭುವಿಯಲಿ ಬೆಳೆವುದು ಹಸಿರ ಸೂಸುತ ತನ್ನಲಡಗಿಹ ಕಸುವ ಕಾಣಿರೋ ಎನುವುದು || 1 || ಬದುಕು ಸಾಗಿಸಲೊಂದು ದಾರಿಯು ದೊರೆವುದತಿ ಅನಿವಾರ್ಯವು ಕೆದುಕೆ ಬೂದಿಯ ಬುದ್ಧಿ ಅಗ್ನಿಯು ಉರಿದು ಬೆಳಗಲಿ ಧ್ಯೇಯವು || 2 || ಯುಕ್ತರಲಿ ಉಂಟೆಂದು ಬುದ್ಧಿಯು ಬುದ್ಧಿಯಿಂದಲೆ ಭಾವನೆ ಸೂಕ್ತ ರೀತಿಯ ಬಾಳ ಹಾದಿಯು […]