ಗಾಢ ನೀರವದಲೊಂದು ಸಣ್ಣ ಕದಲಿಕೆ ಸದ್ದು ತನ್ನ ಸುತ್ತಲು ತಾನೇ ತಿರುಗಿ ಅಲೆ ಅಲೆಯಾಗಿ ವಿಶ್ವ ಕಂಪಿಸಿದ ಹೊತ್ತು ವಿಶ್ವವೇ ಕಂಪಿಸಿದ ಹೊತ್ತು ಸಂಘ ಸಂಭವಿಸಿದ ಹೊತ್ತು || ಪ || ಮೈಮರೆವೊ? ಮರಣವೊ? ತನ್ನುಸಿರ ಬಲವಿಹುದೆ? ಆತ್ಮಹೀನತೆ ವಿಷವ ಕಿತ್ತೊಗೆದು ಬದುಕೀತೆ? ಅನುಮಾನ ತುಂಬಿದ ಹೊತ್ತು ಸಂಘ ಸಂಭವಿಸಿದ ಹೊತ್ತು || 1 || ಉಡುಗಿ ಹೋಗಿದ್ದ ಸ್ವರ ಮರಳಿ ಮೊಳಗಿದ ಸದ್ದು ಮರಗಟ್ಟಿ ಮಲಗಿದ ದೇಶ ಬಲಕೆ ಹೊರಳಿದ ಸದ್ದು ಆತ್ಮದರಿವನು ಪಡೆದ ಹೊತ್ತು […]