ಸಿಂಧು ಸಂಸ್ಕೃತಿಯಲ್ಲಿ

ಸಿಂಧು ಸಂಸ್ಕೃತಿಯಲ್ಲಿ ಸಿರಿ ಪರಂಪರೆಯಲ್ಲಿ ಹಿಂದು ಹೆಸರಲಿ ನಾವು ಬಂದೆವಿಳೆಗೆ ಸಂದ ಕಾಲವನೆಳೆದು ಇಂದು ಯಶ ಸಾಧಿಸಲು ಬಂದಿಹುದು ಶುಭ ಸಮಯ ನಮ್ಮ ಬಳಿಗೆ || ಪ || ಒಡೆದು ಶಂಖಧ್ವನಿಯ ಗುಡುಗು ನೂರ್ಮಡಿಗೊಂಡು ಸಿಡಿಸಿಡಿದು ಸೀಳಾಗಿ ಸ್ವೀಕರಿಪ ಮೊದಲೇ ಬಡವ ಅಂತ್ಯಜರೆಂಬ ತಡೆಗೋಡೆಗಳು ಬೆಳೆದು ದುಡುಕಿ ವಿಷನಾಗಗಳು ಫೂತ್ಕರಿಪ ಮೊದಲೇ ಹುಡುಕಿ ಓರೋರ್‍ವರನು ನಿಜವಿಕಾಸಕೆ ತರಲು || 1 || ವಿಸ್ಮೃತಿಯ ಕರಿಮುಗಿಲು ಪ್ರಗತಿಪಥವನು ಕವಿದು ಪಶ್ಚಿಮಕೆ ಸೋತವರ ಅನುಸರಿಸದೇ ಆತ್ಮರತಿಯಲಿ ಮುಳುಗಿ ಆರ್ತರನು ಕಡೆಗಣಿಸಿ […]

Read More

ಸುರಕ್ಷೆಯ ರಕ್ಷೆಯ ಕಟ್ಟುತ ನಾವು

ಸುರಕ್ಷೆಯ ರಕ್ಷೆಯ ಕಟ್ಟುತ ನಾವು ಮುಂದಡಿಯಿಟ್ಟು ಸಾಗೋಣ ವೇದದ ನಾಡಲಿ ಭೇದವ ತೋರದೆ ಭ್ರಾತೃತ್ವದ ಸೆಲೆ ಬೆಳೆಸೋಣ || ಪ || ದಿವ್ಯ ಪರಂಪರೆ ಗತವೈಭವವನು ನೆನಪಿಸೊ ಪುಷ್ಪವ ಧರಿಸೋಣ ಮೇಲುಕೀಳುಗಳ ಕಳೆಯನು ಕೀಳುತ ಮಾನವತೆಯ ಮಧು ಸವಿಯೋಣ || 1 || ಭಾಷಾಪ್ರಾಂತದ ನಡುವಿನ ಮುನಿಸಿಗೆ ಇಂದಿಗೆ ಮಂಗಳ ಹಾಡೋಣ ಸೋದರತ್ವದ ಕಂಪನು ಬೀರುತ ನಾಡಿನ ಏಳ್ಗೆಗೆ ಶ್ರಮಿಸೋಣ || 2 || ಹೆಜ್ಜೆಹೆಜ್ಜೆಗೂ ಹೃದಯವ ಬೆಸೆಯುತ ರಾಷ್ಟ್ರದ ತೇರನ್ನೆಳೆಯೋಣ ಮಾತೃಮಂದಿರದ ರಕ್ಷಣೆ ಕಾರ್ಯಕೆ ಎಲ್ಲೆ […]

Read More

ಹಿಂದು ರಾಷ್ಟ್ರದ ಸಂತಾನರು ನಾವು

ಹಿಂದು ರಾಷ್ಟ್ರದ ಸಂತಾನರು ನಾವು ಹಿಂದು ವೀರರು ನಾವು ಜೀವನ ನಮ್ಮದು ನಂದಾ ದೀಪವು ಸಕಲವು ತಾಯಿಗೆ ಅರ್ಪಿತವು || ಪ || ಋಷಿಗಳ ವಾಣಿ ಮನ ಮನದಲ್ಲಿ ತ್ಯಾಗ ಬಲಿದಾನದ ಬದುಕಲ್ಲಿ ಸಾಹಸ ಶೌರ್ಯದ ಸಂಕಲ್ಪದ ಪಥ ಸಾಗಿದೆ ಕ್ಷಾತ್ರತೇಜದ ಕರ್ಮರಥ || 1 || ಭಾರತ ಮಾತೆಯ ಭರತರು ನಾವು ಸಿಂಹದ ಜೊತೆ ಒಡನಾಟ ಗಂಗಾಮಾತೆಯ ಗಾಂಗೇಯರು ನಾವು ಮುಷ್ಠಿಯಲೀ ವಿಶ್ವಪಟ || 2 || ಸ್ವಾಭಿಮಾನ ಸಂಪನ್ನ ರಾಷ್ಟ್ರವೇ ಕ್ಷಣ ಕ್ಷಣ ಜೀವನದ […]

Read More

ಕೇಶವನ ಕಲ್ಪನೆಯನು ಮಾಧವನ ಮಾರ್ಗವನು

ಕೇಶವನ ಕಲ್ಪನೆಯನು ಮಾಧವನ ಮಾರ್ಗವನು ಅನುಸರಿಸುತ ಮುನ್ನಡೆದಿಹ ಕಾರ್ಯಾರ್ಥಿಗಳು ನಾವು ಧ್ಯೇಯಕೇತನದೆದುರು ಶರಣಾರ್ಥಿಗಳು ನಾವು || ಪ || ಮತಜಾತಿಯ ಭೇದವಿರದೆ ನೆಲಭಾಷೆಯ ಜಗಳವಿರದೆ ಸಮರಸತೆಯ ಏಕತೆಯಲಿ ಸಚ್ಚರಿತವ ಸಂಕಲಿಸುತ ಸಂಘಸುಧಾಸಿಂಧುವಲಿಹ ಕಾರ್ಯಾರ್ಥಿಗಳು ನಾವು || 1 || ಹೊನ್ನುಹಣದ ಮೋಹವಿರದೆ ಅಧಿಕಾರದ ದಾಹವಿರದೆ ಕರ್ತವ್ಯದ ಭಾವ ಬೆಳೆಸಿ ಮಾತೃಭೂಮಿ ರಕ್ಷೆಗಾಗಿ ಅನವರತವು ನಿರತರಿರುವ ಕಾರ್ಯಾರ್ಥಿಗಳು ನಾವು || 2 || ವೈಭವೋತ್ತುಂಗದಲಿ ಮತ್ತೆ ಮೆರೆವ ಭಾರತಿಯನು ಇದುವೆ ದೇಹದಕ್ಷಿಯಿಂದ ಕಾಣಲೆಂದು ಹಂಬಲಿಸುತ ಸಂಕಲ್ಪವ ಸ್ವೀಕರಿಸಿಹ ಕಾರ್ಯಾರ್ಥಿಗಳು […]

Read More

ರಕ್ಷೆಯ ಕಟ್ಟುವೆವು ನಾವು

ರಕ್ಷೆಯ ಕಟ್ಟುವೆವು ನಾವು ರಕ್ಷೆಯ ಕಟ್ಟುವೆವು ನಿಶ್ಚಯ ಮಾಡಿಹೆವು ಬಲಾಢ್ಯ ರಾಷ್ಟ್ರವ ಕಟ್ಟುವೆವು || ಪ || ಹಿಂದೂ ಸಾಗರದಲೆಗಳಸಂಖ್ಯ ಬ್ರಹ್ಮದೇವನಿಗು ಎಣಿಸಲಸಾಧ್ಯ ಕಟ್ಟಿಹ ರಕ್ಷೆಗಳಗಣಿತವಣ್ಣ ಹೊಳೆ ಹೊಳೆಯುತಲಿದೆ ಕೇಸರಿಬಣ್ಣ || 1 || ಒಂದೇ ತಾಯಿಯ ಮಕ್ಕಳು ನಾವು ಒಂದೇ ಮಣ್ಣಿನ ಕಣಗಳು ನಾವು ಮೇಲುಕೀಳುಗಳ ಭೇದವನಳಿಸಿ ಸ್ನೇಹದ ಪ್ರೇಮದ ಭಾವನೆ ಬೆಳೆಸಿ || 2 || ಎಮ್ಮೊಳಹೊರಗಿನ ಶತ್ರುಗಳನ್ನು ಸುಟ್ಟುರಿಸುತ ದುರ್ಮಾರ್ಗಿಗಳನ್ನು ದೃಢಸಂಕಲ್ಪದ ಸತ್ಪಥದಲ್ಲಿ ಮುನ್ನುಗ್ಗುತ ಜನಮನವನು ಗೆಲ್ಲಿ || 3 || ಮೈಮರೆವಿನ […]

Read More

ಹಿಂದೂ ನಾವು ಭೀತಿಯದಾರದು

ಹಿಂದೂ ನಾವು ಭೀತಿಯದಾರದು ಜಗದೀ ನಮಗಿಂದು ಭಗವಾಧ್ವಜವೇ ಪ್ರಾಣ ನಮ್ಮದು ಜೀವನ ಪುಷ್ಪದೊಳರ್ಚಿಪೆವಿಂದು || ಪ || ಹುಕ್ಕ ಬುಕ್ಕರು ವೀರ ಶಿವಾಜಿ ಪ್ರತಾಪ ಪುಲಿಕೇಶಿ, ಹೋ ಪ್ರತಾಪ ಪುಲಿಕೇಶೀ ಪ್ರಾಣಗಳರ್ಪಿಸಿ ಹಿಂದೂ ಧರ್ಮದ ಕೀರ್ತಿಯ ಜಗದೊಳು ಬೀರಿದರಂದು || 1 || ತಳೆದೆವು ಜನ್ಮವ ಭಾಗ್ಯವಿದೆಮ್ಮಯ ಹಿಂದೂಸ್ಥಾನದಲಿ, ಹೋ…. ಹಿಂದೂ ಹಿಂದೂ ಘೋಷವ ಗೈಯುತ ಜಗವನು ಪಾವನ ಮಾಡುವೆವಿಂದು || 2 || ಹಿಂದೂ ಬಂಧುಗಳೆಲ್ಲರು ಕಲೆಯುತ ಶಕ್ತಿಯ ಗಳಿಸುತಲಿ, ಹೋ….. ಹಿಂದುತ್ವದ ಶ್ರೀ ವಿಜಯ […]

Read More

ಈ ತಾಯಿನಾಡಿನ ಯೋಧರು ನಾವು

ಈ ತಾಯಿನಾಡಿನ ಯೋಧರು ನಾವು ಸ್ವಾತಂತ್ರ್ಯದ ಉನ್ಮತ್ತರು ನಾವು || ಪ || ಬಲಿವೇದಿಕೆಯಲಿ ನಗುನಗುತ ತಲೆಯೊಡ್ಡುವ ವೀರರು ನಾವು ಜನನಿಯ ವೀರ ಪೂಜಾರಿಗಳು ಸರ್ವಸ್ವಾರ್ಪಣ ಗೈವವರು ದೇಶಪ್ರೇಮದ ಮಧುರಸದಿ || 1 || ದೇಶಪ್ರೇಮದ ಮಧುರಸದಿ ಮುಳುಗಿಹುದೆಮ್ಮೀ ಜೀವನವು ತನು ಮನ ಧನ ಜೀವನವೆಲ್ಲಾ ನಮ್ಮೀ ನಾಡಿಗೆ ಅರ್ಪಿತವು ಸಮರದೊಳಿಟ್ಟಡಿಯನು ಮರಳಿ ಹಿಂದೆಗೆಯದ ವೀರರು ನಾವು || 2 || ಆರ್ಯವೀರ ಸಂತಾನರು ನಾವು ಭಾರತ ಸಿರಿಯನು ಬೆಳಗುವೆವು ರಣದೊಳು ಕಾದುತ ಮಡಿಯುವೆವು ಸಮರ್ಥರೆನಿಸುತ ಬಾಳುವೆವು […]

Read More

ಸುರನದಿಯನು ಧರೆಗಿಳಿಸಿದ

ಸುರನದಿಯನು ಧರೆಗಿಳಿಸಿದ ಧೀರನ ವಾರಸುದಾರರು ನಾವು ಸೋಲನೆ ಗೆಲುವಿನ ಸಾಧನಗೊಳಿಸುವ ಸಾಹಸಗಾರರು ನಾವು ಭಾರತವೀರರು ನಾವು… ನವಭಾರತ ವೀರರು ನಾವು || ಪ || ಅಡಿಗಡಿಗೆದುರಾಗಿಹ ಅಡೆತಡೆಗಳ ಅಡಿಯಿಂದಲೆ ಕಿತ್ತೆಸೆಯುವೆವು ನಾಡಿನ ಗಡಿಗೌರವ ರಕ್ಷಣೆಗೆ ಪ್ರಾಣವನೇ ಮುಡಿಪಿರಿಸುವೆವು || 1 || ಸ್ವಂತದ ಚಿಂತನೆಗಳನು ಬದಿಗಿರಿಸಿ ರಾಷ್ಟ್ರದ ಚಿಂತನೆ ಮಾಡುವೆವು ಕಠಿಣ ಸವಾಲುಗಳನು ಸ್ವೀಕರಿಸಿ ದೇಶದ ಹಿತ ಕಾಪಾಡುವೆವು || 2 || ನಮ್ಮಯ ಜನರೇ ಸುಮ್ಮನೆ ನಿಂದಿಸಿ ಹುಸಿ ಅಪವಾದವ ಹೊರಿಸಿರಲು ಅಗ್ನಿಪರೀಕ್ಷೆಗೆ ಒಳಗಾಗಿಹೆವು ಮಿಥ್ಯೆಗಳಿಂದಲಿ […]

Read More