ರಣದುಂದುಭಿಯ ಕರೆ ಕೇಳುತಿದೆ ಏಳಿ ಎದ್ದೇಳಿ ನವಭಾರತವು ಮೈತಾಳುತಿದೆ ಜಡತೆಯ ಪೊರೆ ಸೀಳಿ ಏಳಿ ಎದ್ದೇಳಿ || ಪ || ಮಾತೃಭಕ್ತಿಯ ಸಂಘಶಕ್ತಿಯ ಕಾರ್ಯದಿ ತೊಡಗಿಸುವ ಶತ್ರುಕೂಟಗಳ ಉಗ್ರಗಾಮಿಗಳ ಅಬ್ಬರ ಅಡಗಿಸುವ || 1 || ಶೌರ್ಯಧೈರ್ಯಗಳ ಶಸ್ತ್ರವ ಪಿಡಿದು ಸಮರಕೆ ಸಜ್ಜಾಗಿ ಮಾತೃಭೂಮಿಯ ಅದ್ವಿತೀಯತೆಯ ರಕ್ಷಿಸಲೊಂದಾಗಿ || 2 || ಛತ್ರಪತಿಯ ಆದರ್ಶವೆಮಗಿರೆ ಇನ್ನೇತರ ಅಳುಕು? ರಾಷ್ಟ್ರ ರಕ್ಷಣೆಯ ಧ್ಯೇಯಸಿದ್ಧಿಗೆ ಅದುವೇ ಮುಂಬೆಳಕು || 3 || ಚರಿತೆ ಸಾರಿದೆ ಸ್ವಾಭಿಮಾನದ ಸ್ಫೂರ್ತಿಯ ಇತಿಹಾಸ ಮೊಳಗಲೆಲ್ಲೆಡೆ […]