ನವಭಾವ ನವಜೀವ ನವಶಕ್ತಿ ತುಂಬಿಸುವ ಹಾಡೊಮ್ಮೆ ಹಾಡಬೇಕು ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ ವೀರಧ್ವನಿ ಏರಬೇಕು || ಪ || ಉನ್ನತೋನ್ನತ ಘನಹಿಮಾಗ್ರಿ ಶಿಖರವನೇರಿ ಹಾಡಲ್ಲಿ ಹಾಡಬೇಕು ಹಾಡು ನುಡಿಗುಂಡುಗಳು ಹಾರಿದಶದಿಕ್ಕಿನಲಿ ಭಯವಬೆನ್ನಟ್ಟಬೇಕು ಗಂಡೆದೆಯಘರ್ಜನೆಗೆ ಮೂಹತ್ತು ಮೂರ್ಕೋಟಿ ಕಲಕಂಠ ಬೆರೆಸಬೇಕೂ ಭೂಮ್ಯಾಂತರಾಳದಲಿ ನಭಚಕ್ರಗೋಳದಲಿ ಮಾರ್ದನಿಗಳೇಳಬೇಕು || 1 || ಜಡನಿದ್ರೆ ಸಿಡಿದೆದ್ದ ವೀರಾಟ್ಟಹಾಸದಲಿ ಬಾನುಭುವಿ ಬೆಳಗಬೇಕು ನಡೆನುಡಿಗಳೆಡೆಯಲ್ಲಿ ಪದತಾಳಗತಿಯಲ್ಲಿ ಕ್ರಾಂತಿಕಿಡಿ ಕೆರಳಬೇಕು ಅಳಿದುಳಿದ ಭವ್ಯತೆಯ ರುದ್ರ ಶಿಖೆಯುಜ್ವಲಿಸೆ ಹಾಡು ತಿದಿಯೊತ್ತಬೇಕೂ ದಿವಸ ದಿವಸಗಳಿಂದ ಮನದಿ ಮರುಗುತಲಿದ್ದ […]
ನವ ಭಾರತ ಶಿಲ್ಪಿಗಳಾಗೋಣ ಹೊಸ ಬಾಳಿನ ಭಾಗ್ಯವ ಬರೆಯೋಣ || ಪ || ಗಂಗೆಯ ತಂದ ಭಗೀರಥನಂತೆ ವಿಷವನು ಉಂಡ ನಂಜುಂಡನಂತೆ ತಪವನು ಗೈದು ವಿಷವನ್ನು ಕುಡಿದು ಸಮಾಜ ದೇವಗೆ ಪ್ರಾಣವ ಎರೆದು || 1 || ಕಾಣುವ ಅರಿಗಳ ಅಟ್ಟುತ ಯೋಧರು ಕಾಣದ ವೈರಿಯ ಮೆಟ್ಟುತ ವೈದ್ಯರು ಕಾಯಕ ಯೋಗಿಯ ತರದಲಿ ರೈತರು ತಾಯಿಯ ಕಷ್ಟವ ತೊಳೆಯುತಲಿಹರು. || 2 || ನವ ಚೈತನ್ಯದ ನವ ಕುಸುಮಗಳು ಕಾಣುತ ಹೊರಟಿವೆ ನವ ಕನಸುಗಳು ಭಾರತ ಮಾತೆಯು […]
ಜನ ಜಾಗೃತ ನವ ಭಾರತ ಮಹೋದಯಂ ಈ ಕನುಲತೋನೇ ಕಾಂಚುದಾಂ ಈ ಜೀವತಮುನ ಸಾಧಿಂಚುದಾಂ || ಪ || ಪ್ರತಿ ಹೃದಿಲೋ ದೇಶಭಕ್ತಿ ಮೋಸುಲೆತ್ತ ನರನರಾನ ನವ ಚೇತನ ವೆಲ್ಲಿ ವಿರಿಯ ಸಮತಾ ಭಾವನ ಪೆಂಚಿ ಪ್ರತಿ ಹೃದಿಲೋ ಮಮತ ನಿಂಪಿ ಜಾತಿನಿ ಸೇವಿಂಚುದಾಂ ಮನ ಭಾರತಿನೇ ಪೂಜಿಂಚುದಾಂ || 1 || ಮನ ಪೂರ್ವಲ ಮಹನೀಯುಲ ಸ್ಮರಿಯಿಂಚಿ ಮನ ಸಂಸ್ಕೃತಿ ಮಹೋನ್ನತಿನ ಗುರ್ತೆರಿಗಿ ಪರಿಹರಮು ಶ್ರಮಿಯಿಂಚಿ ಜಗತಿನ ಶಿರಮೆತ್ತಿ ನಿಲಚಿ ಜಾತಿನಿ ಸೇವಿಂಚುದಾಂ ಮನ ಭಾರತಿನೇ ಪೂಜಿಂಚುದಾಂ || 2 […]
ಹಿಂದುಸ್ಥಾನದ ಚಿರ ನವ ಹರಯವೆ, ಹೇ ಹೈಮಾಚಲ ಸಂದರ್ಶನವೆ ಇದೋ ಉದ್ಭವಿಸಿದೆ ಪ್ರಾಣಪ್ರವಾಹವು, ಯುವಜನ ಜಾಹ್ನವಿ ಸಿಂಧೂಬಲವು || ಪ || ರಣಮತ್ತರ ಬಿಸಿನೆತ್ತರ ಬಾಹುವೆ, ಓ ನಾಡಿನ ಯೌವನ ಸಿಡಿದೇಳು ರಾಷ್ಟ್ರದ ನೇತ್ರ ತೃತೀಯ ಸ್ವರೂಪವೆ, ತಾರುಣ್ಯವೇ ಉರಿಗಣ್ ತೆರೆ ಏಳು || 1 || ದೃಢ ನಿಶ್ಚಯದೊಳು ಹೃತ್ಪರ್ವತಗಳು, ಕೋಟ್ಯಂತರ ನಿಂತಿರೆ ರಾಷ್ಟ್ರದಲಿ ದುರ್ಗಮ ದುರ್ಗಗಳೆಚ್ಚರಗೊಳುತಿವೆ, ಅರಿಗೆಂದಿಗು ದೊರೆಯದು ಜಯವಿಲ್ಲಿ || […]
ರಾಷ್ಟ್ರ ಮೇ ನವ ತೇಜ ಜಾಗಾ || ಪ || ಶಿಶಿರ ಬೀತಾ ಪರಕೀಯತಾ ಕಾ, ರಾಷ್ಟ್ರಮೇ ನವ ತೇಜ ಜಾ ಸಂಘ ರವಿ ಚಮಕಾ ಪ್ರಖರತಮ ಘನ ಅಂಧೇರಾ ದೂರ ಭಾಗಾ || ಅ.ಪ. || ಭೇದ ಕರಕೇ ಗಹನ ಪರ್ದಾ, ಭೇದ ಕರ ಭ್ರಮ ಕೀ ತಮಿಸ್ರಾ ಫೂಟ ನಿಕಲೀ ರಶ್ಮಿ ಮಾಲಾ, ಪೂಜ್ಯ […]
ಅರಳಲಿದೆ ನವಭಾರತ ದೇಶ ಕಗ್ಗತ್ತಲ ಒಡಲಿಂದ ಬೆಳಗಲಿದೆ ಭುವಿಯಂಗುಲ ಅಂಗುಲ ಹಿಂದುತ್ವದ ಪ್ರಭೆಯಿಂದ || ಪ || ಮನುಜನ ಜನುಮವ ಸಾರ್ಥಕಗೊಳಿಸಿಹ ಮುನಿಜನರಮೃತ ವಾಣಿ ಅನುಜತ್ವದ ಆದರ್ಶವ ಸಾರಿದ ಕಾವ್ಯಗಳದ್ಭುತ ಶ್ರೇಣಿ ಚಿಮ್ಮಲಿದೆ ಚೈತನ್ಯದ ಚಿಲುಮೆ ಪ್ರಾಚೀನದ ನೆಲೆಯಿಂದ || 1 || ಶತಶತಮಾನದ ಆ ಗತವೈಭವ ಭೂಗತವಾಗುವ ಮುನ್ನ ಜಾಗೃತಗೊಳಿಸಿ ಸುಷುಪ್ತ ಜನಾಂಗವ ಸಮಯವು ಮೀರುವ ಮುನ್ನ ಉದಿಸಲಿದೆ ನವ ಹಿಂದುಸಮಾಜ ಶತ ಅವಶೇಷಗಳಿಂದ || 2 || ಹಬ್ಬಿದ ಮಬ್ಬಲಿ ಗುರಿಯನು ತಪ್ಪಿದ ಮೌಢ್ಯವನಪ್ಪಿದ […]
ನವಭಾರತ ನಿರ್ಮಾಣಕೆ ಎರಗಿದ ಐಕ್ಯ ವಿರೋಧಿ ಸವಾಲುಗಳೇ ಯುವ ಭಾರತ ಹೊರಟಿದೆ ಸ್ವೀಕರಿಸಲು ನಿಮ್ಮನು ನಿಮ್ಮ ಅಖಾಡದಲೆ || ಪ || ಅಪ್ರತಿಹತವಿದು ನಾಡಿಗೆ ಕೂಡಿದ ಧ್ಯೇಯ ಜೀವನದ ಬಲದರಿವು ತನುಮನಗಳ ಅನುಶಾಸನ ನೀಡಿದ ಇತಿಹಾಸ ಪ್ರವಾಹದ ತಿರುವು || 1 || ಸಂಘಟನೆಯ ಗಂಗೋತ್ರಿಯ ಬುಗ್ಗೆ ನಿಜ ಸಮಾಜದಂಚಿನವರೆಗೆ ಅನುಜತ್ವದ ಸ್ನೇಹಾಂಕಿತ ಲಗ್ಗೆ ಮನುಜತ್ವದ ಮೇರೆಯವರೆಗೆ || 2 || ಧ್ರುವ […]
ಮೈ ಮರೆತಭಿಮಾನವು ಮೈ ಕೊಡಹುತ ಮೇಲೇಳುತಿದೆ ಮರುತನ ಸ್ವರದಲಿ ನವ ರಾಗೋದಯದುಲಿ ಕೇಳುತಿದೆ || ಪ || ಅಳಲಿನ ನಿಶೆ ಅಳಿಯಿತು ಅಳುತಳುತೆ, ಮೊಳಗಿತಿದೋ ಮುಂಜಾವಿನ ಗೀತೆ ಜೀವನಕುಸುಮಗಳರಳಿರೆ ನಗುತೆ, ರುಧಿರಾರ್ಚನೆಗಿನ್ನಾವುದು ಕೊರತೆ? ಇತಿಹಾಸದ ಕಥೆ, ಉಪಹಾಸದ ವ್ಯಥೆ ಮೈತಾಳುತಿದೆ || 1 || ಹಾರಿದ ಭರವಸೆಗಳ ಖಗಕುಲವು, ಹೃದಯದ ಗೂಡಿಗೆ ಮರಳುತಲಿಹುದು ಬಾಳಡಿಯಲಿ ಸಾಯುತಲಿರೆ ಸಾವು ಬಗೆ ಬೆದರದು ಬಳಿ ಸುಳಿಯದು ನೋವು ಕರ್ಬೊಗೆ ಗಾಳಿಗೆ ಕರಗುವ ಬಗೆ ಹಗೆ ಹಿಂದೋಡುತಿದೆ || 2 || […]
ಭಾರತದ ಆಗಸದಿ ನವಸೂರ್ಯೋದಯವಾಗುತಿದೆ ಶತಶತಮಾನದ ದೈನ್ಯವನಳಿಸುತ ನವ ಜೀವನ ಪ್ರಭೆ ಮೂಡುತಿದೆ || ಪ || ರೂಢಿಯ ಜಡತೆಯ ಬಂಧನ ಕಳಚುತ ನವೋತ್ಸಾಹ ನವ ಸ್ಫೂರ್ತಿಯನೆರೆಯುತ ಮಸಣದ ಶೂನ್ಯದಿ ಸಾಸಿರ ಸುಮಗಳ ನವ ನಂದನ ಸಜ್ಜಾಗುತಿದೆ || 1 || ತ್ಯಾಗ ತಪೋಮಯ ಋಷಿ ಮುನಿ ಜೀವನ ಸಾಹಸ ಚೈತ್ರದ ಕ್ಷಾತ್ರೋತ್ಸ್ಫುರಣ ಶೀಲದ ಶೌರ್ಯದ ಆರಾಧನೆಯಲಿ ನಾಡಿದು ತನ್ಮಯವಾಗುತಿದೆ || 2 || ಬಿಂದುವು ಸಿಂಧುತ್ವಕೆ ತಾನೆಳೆಸಲು ಕಳೆಯದೆ ಹಿಂದುತ್ವದ ಬಿರಿಯಳಲು ಬಾನ್ಧರೆ ಬೆಸೆಯುವ ಮಹದಾಕಾಂಕ್ಷೆಯ ಸಂಘ […]