ನವ ಭಾರತ ನವ ಯುವಕನೆ ನವೋದಯದ ಹರಿಕಾರನೆ ನಾಡ ನಾಡಿಯನ್ನೇ ಮಿಡಿವ ನವ-ನೂತನ ಚೇತನವೆ || ಪ || ಹಿಮಾಚಲದ ತುಂಗಶೃಂಗ ನಿನ್ನ ಉತ್ತಮಾಂಗ ಧವಳ ವರ್ಣ ದಯಾಪೂರ್ಣ ನಿನ್ನ ಅಂತರಂಗ ರತ್ತಧುನೀ ಧಮನಿ ಧಮನಿ ನದಿ ನದಂಗಳೆಲ್ಲ ತದತ್ತರಂಗವಾಗಿ ಹರಿವ ತೇಜದೊಡಲು ನಿನ್ನದು || 1 || ದ್ರೋಹ ದರ್ಪ ದೌರ್ಜನ್ಯಕೆ ಎತ್ತು ಕೊಡಲಿ ಇಂದೇ ತುಂಡಾದರೂ ಮೊಂಡಾದರೂ ಭರತಖಂಡ ನಿನ್ನದೇ ದಿಕ್ತಟದಲಿ ಪಟಪಟಿಸಲಿ ಭವ್ಯನಾಡ ಬಾವುಟ ಶಾಂತಿ ಸಾಕು ಕ್ರಾಂತಿ ಬೇಕು ತೋರೋ ಮನದ […]