ರಾಷ್ಟ್ರಸೇವಕ ಬಾರ ಹಿಂದು ವೀರನೆ ಬಾರ ನನ್ನ ಕಂದನೆ ಕೇಳ, ಎನುವಳಮ್ಮ || ಪ || ಅಂಗ ಭಂಗವದಾಗೆ ಮರಳಿ ಜೋಡಿಸಬಹುದು ವಂಗಭಂಗವದಾಗೆ ಬಾರದೇಕೆ? ಸಿಂಧು ಗಾಂಧಾರ ಬ್ರಹ್ಮಾದಿ ಮುರಿದಂಗಗಳ ಕಸಿಯ ಮಾಡಲು ಬನ್ನಿ ಎನ್ನ ಮೈಯ್ಗೆ || 1 || ಸೈನ್ಯವಾಗಿರೆ ಹಿಂದು ಮನೆಮನೆಯೆ ತಾನಿಂದು ಸ್ತನ್ಯವಾಗಿರೆ ರಾಷ್ಟ್ರಭಕ್ತಿ ನಿಮಗೆ ದೈನ್ಯ ದುಃಖ ಹತಾಶೆಯ ಕಾಲ ಹಿಂದಾಗಿ ಮಾನ್ಯತೆಯ ಪಡೆಯೆನೇ ಜಗದೆ ನಾನು? || 2 || ಆಗು ಗೆಳೆಯಗೆ ಮಿತ್ರ ಶಕ್ತಿ ಹಿಡಿದವರ ಕುತ್ತು […]