ತುಂಬಿಸಿದೆ ಜಗದಗಲ

ತುಂಬಿಸಿದೆ ಜಗದಗಲ ನಂಬಿಗೆಯ ಬೆಳಕ | ಬಿಂಬಿಸಿದೆ ಧ್ಯೇಯ ವಿಜೃಂಭಿಸಿದೆ ಪುಳಕ || ಪ || ಗ್ರಾಮಗುಹೆಕಾನನವೆ ನಗರನಗಜಗವೆ ಛಾತ್ರ ಕಾರ್ಮಿಕ ಕೃಷಿಕ ಮಹಿಳೆಯೆ ಮಗುವೆ ರೂಪಿಸಿಹೆ ಸಂಸ್ಕೃತಿಯ ಬದಲಾಯ್ತು ಯುಗವೆ ವ್ಯಾಪಿಸಿಹೆ ಮನೆ ಮನವ ಅರಳಿಹುದು ಭಗವೆ || 1 || ಸಂಘಟನೆ ಸಂಘರ್ಷ ಸೃಷ್ಟಿ ಶೀಲತೆಯೆ ಲೋಕಮನ ಸಂಸ್ಕಾರ ನಿತ್ಯ ಜಾಗೃತಿಯೆ ಹಿಂದು ರಾಷ್ಟ್ರದ ಪರಮವೈಭವ ಶ್ರುತಿಯೆ ನಂದದಾದರ್ಶಗಳ ಮೂರ್ತ ಸತ್‍ಕೃತಿಯೆ || 2 || ಮಾನವತೆ ನೆಲೆಗೊಳಿಸಿ ಮೆರೆವ ಛಲಬಲವೆ | ಮನುಕುಲಕೆ […]

Read More