ವಿಶ್ವ ವಂದ್ಯೆ ಜಗಜ್ಜನನಿ ನಮನ ತಾಯಿ ಭಾರತಿ ದಿವ್ಯ ಪ್ರಭೆಯ ಜ್ಞಾನ ಸುಧೆಯ ಚಿರನವೀನ ಸಾರಥಿ || ಪ || ರಜತಗಿರಿಯ ಮುಕುಟದಲ್ಲಿ ತೋರುತಿಹುದು ನಿನ್ನ ಸೊಬಗು ಪಾದಕಮಲ ತೊಳೆಯುತಿರುವ ಜಲಧಿಗುಂಟು ದಿವ್ಯಮೆರುಗು ತುಂಬಿ ತೊನೆವ ಪೈರು ಪಚ್ಚೆ ಹಸಿರುಡುಗೆಯ ಚೆಲ್ವ ಬೆಡಗು ಗಂಗೆ ತುಂಗೆ ಸಿಂಧು ಕಪಿಲೆ ಸುರನದಿಗಳ ತುಂಬು ಬಳುಕು || 1 || ಚೆಲುವಿನ ಖನಿ ಮಾತೆಗಂತೆ ಸ್ವಾಭಿಮಾನಿ ಪುತ್ರರು ಬಂಧ ಮುಕ್ತಿಗಾಗಿ ತಮ್ಮ ಉಸಿರುಸಿರನು ಕೊಟ್ಟರು ಅಪಮಾನವ ಸಹಿಸದಂಥ ಅಭಿಮಾನಿ ವೀರರು […]