ನಗರಗಳು ಸಾಕೆಂದು ನಮ್ಮೂರೆ ಮೇಲೆಂದು ಯುವಜನತೆ ಮುಖ ಮಾಡಿ ತಮ್ಮೂರಿಗೆ ಜೀತದ ನೌಕರಿಯ ಧಿಕ್ಕರಿಸಿ ನಡೆದಿಹರು ಮನ ಮಾಡಿ ಆತ್ಮನಿರ್ಭರದೆಡೆಗೆ || ಪ || ಕೃಷಿಯ ಕಷ್ಟವೂ ಏಕೆ, ನಗರ ಸುಖದಾ ಬಯಕೆ ಹೊತ್ತಿತ್ತು ಯುವಜನರ ಆತ್ಮದೊಳಗೆ ದೂರದಾ ಬೆಟ್ಟವದು ನುಣ್ಣಗೆಂದರಿಯದೆ ಬಿದ್ದಿತ್ತು ದಾಸ್ಯದಾ ಕೂಪದೊಳಗೆ ಗಡಿಬಿಡಿಯ ಓಡಾಟ, ಕೆಲಸದ ಜಂಜಾಟ ಹೊತ್ತು ಕೂಳಿಗೂ ಸಮಯ ಸಿಗದೆ || 1 || ಜೀತದ…. ಈ ಕೆಲಸವೇ ಮೇಲು ಆ ಕೆಲಸ ಬಲು ಕೀಳು ಬಿತ್ತಿತ್ತು ಭಾವನೆಯು ಮನದದೊಳಗೆ […]