ನಾಡನು ಕಟ್ಟಲು ಬನ್ನಿ ಅರಿಗಳ ಮೆಟ್ಟಲು ಬನ್ನಿ ಹೇಡಿತನವನು ಬಡಿದೋಡಿಸುತಾ ಗುರಿಯನು ಮುಟ್ಟಲು ಬನ್ನಿ || ಪ || ನಮ್ಮ ಪರಂಪರೆ ಇತಿಹಾಸ ಸಾಸಿರ ಸಂತರ ಸಂದೇಶ ಸ್ಫೂರ್ತಿಯ ಚಿಮ್ಮಿಸಿ ಶಕ್ತಿಯ ಹೊಮ್ಮಿಸಿ ಮೊಳಗಲಿ ಮಾತೆಯ ಜಯಘೋಷ || 1 || ಶೌರ್ಯ ಪರಾಕ್ರಮ ವರ್ಧನೆಗೆ ಧೈರ್ಯ ಸಾಹಸದ ವರ್ತನೆಗೆ ಸಂಘಶಕ್ತಿಯಿಂ ದೇಶಭಕ್ತಿಯಿಂ ರಾಷ್ಟ್ರದ ನಿಜ ಪರಿವರ್ತನೆಗೆ || 2 || ಸುತ್ತಲು ರಿಪುಗಳು ಮುತ್ತಿರಲು ವಿದ್ರೋಹವು ಹೆಡೆ ಎತ್ತಿರಲು ಜಡತೆಯ ತೊರೆದು ದೃಢತೆಯ ಮೆರೆದು ಅಂತಿಮ […]
ಹೊಸ ನಾಡನು ಕಟ್ಟುವಾ ಹೊಸ ಜಾಡನು ಮೆಟ್ಟುವಾ ಹೊಸ ದಿಗಂತಗಳನು ದಾಟಿ ಭರದಿ ಗುರಿಯ ಮುಟ್ಟುವಾ || ಪ || ಹೊಸ ಹರೆಯದ ಕ್ಷಣಕ್ಷಣ ಬಿಸಿ ನೆತ್ತರ ಕಣ ಕಣ ಮುಡಿಪಾಗಲಿ ಗೈಯಲು ನಾಡಿನ ಹಿತರಕ್ಷಣ || 1 || ಸುತ್ತಲಿರುವ ಬಡತನ ಜಡತೆ ಮೌಢ್ಯ ಹಗೆತನ ಕಿತ್ತೊಗೆಯಲು ಟೊಂಕ ಕಟ್ಟಿ ಸುಮುಹೂರ್ತವು ಈ ದಿನ || 2 || ಹಿಂದು ಹಿತವೆ ನಾಡ ಹಿತ ಮರೆತರೆ ಅನಾಹುತ ಪೊಳ್ಳು ಜಾತ್ಯತೀತತೆ ಕಿತ್ತೊಗೆಯಲಿ ಭಾರತ || 3 […]
ಹಿಂದೂ ವೀರನೆ ನಿನ್ನೊಳು ಅಡಗಿಹ ಛಲಬಲ ಸಾಹಸ ಹೊಮ್ಮುವುದೆಂದು? ಈ ನಾಡಿನ ನರನಾಡಿಗಳಲ್ಲಿ ಕ್ಷಾತ್ರಪ್ರವಾಹವು ಉಕ್ಕುವುದೆಂದು? ಬಾ ಬಾ ನಾಡನು ಕಟ್ಟಲು ಇಂದು || ಪ || ವೀರಧನುರ್ಧರ ಆ ದಾಶರಥಿ ಚಕ್ರವ ಪಿಡಿದಿಹ ಪಾರ್ಥಸಾರಥಿ ನಿನ್ನೆದೆ ಗುಡಿಯಲಿ ಪಡಿಮೂಡಿಹರು ಅರಿವಿನ ಒಳಗಣ್ ತೆರೆಯೋ ಇಂದು || 1 || ಖಡ್ಗ ಭವಾನಿಯ ವಾರಸುದಾರ ವೀರಶಿವಾಜಿಯ ಓ ಸರದಾರ ಸಾಹಸಕಾರ್ಯಕಿದೇ ಸುಮುಹೂರ್ತ ವಿಜಯರಣಾಂಗಣದೊಳು ಧುಮುಕಿಂದು || 2 || ಕೈಜಾರಿದ ಅವಕಾಶಗಳೆನಿತೋ? ಕೈಮೀರಿದ ಸಂದರ್ಭಗಳೆನಿತೋ? ಕಳೆದಿಹ ಕಾಲವು […]