ಒಂದು ದಿನ ಸಂಜೆಯ ಸಮಯ ತಿರುಗಾಡಲು ಹೊರಟಾಗ ಕಂಡೆನು ನಾ ಮನವನು ಸೆಳೆವ ಸುಂದರ ದೃಶ್ಯವನೊಂದ || ಪ || ಮಾರ್ಗದ ಬದಿಯಲಿ ಬಯಲು, ಆ ಬಯಲಲಿ ಮಕ್ಕಳ ಹುಯಿಲು ಮಕ್ಕಳಿಗೆಲ್ಲಾ ಮುಖ್ಯನು ಒಬ್ಬ, ಗರ್ಜಿಸಿತವನಾ ಬಿಗಿಲು ಟಿರ್ರ್ ಟ್ರಿಕ್… ಟಿರ್ರ್ ಟ್ರಿಕ್ …. ತತ್ತರಿಸಿತು ಆ ಮುಗಿಲು || 1 || ದಕ್ಷ ಆರಮ ಆಜ್ಞೆ, ಅದು ಶಿಸ್ತಿಗೆ ಸೂಚಕ ಸಂಜ್ಞೆ ಸಂಜ್ಞೆಯನರಿತು ಸಾಗಿತು ಮುಂದೆ, ತರುಣರ ಬಾಲರ ಸೇನೆ ಏಕ್-ದೋ-ಏಕ್-ದೋ, ಏಕ್-ದೋ-ಏಕ್-ದೋ, ಸಂಪತಗೊಂಡಿತು ತಾನೇ […]
ಮಾತೆಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೆ ಆಸೆಯು ಮನದಲಿ || ಪ || ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ || 1 || ನಗುತ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ ನಿನ್ನ […]
ಎನ್ನೆದೆಯ ಬಿಸಿರಕ್ತ ಕುದಿಕುದಿಸಿ ಮಸಿಮಾಡಿ ನಾ ಬರೆಯಬಲ್ಲೆನೇ ನಾನು ಕವಿಯು ವಿಶ್ವ ಜನನಿಯ ಗರ್ಭ ಮಾತೃಭೂಮಿಯ ಬಸಿರು ತಾನ್ ತಪಿಸುತಿರೆ ಹೇಳಲಾವ ಪರಿಯು || ಪ || ದುರ್ಬಲರ ಮರ್ದಿಸುತ ಪಶುಬಲದಿ ವರ್ಧಿಸುತ ರಾಷ್ಟ್ರರಾಷ್ಟ್ರಗಳ ಸ್ವಾತಂತ್ರ್ಯ ಸೆಳೆಯುತ್ತ ಸುಲಿಗೆ ಸಂಸ್ಕೃತಿಯೆಂದು ತಿಳಿದಿರುವ ಪಾಪಿಗಳ ಮುರಿವ ಲೇಖನಿ ಬೇಕು ರಕ್ತವದಕೆ ಮಸಿ || 1 || ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ ಮೂರಕ್ಷರದೊಳೇನು ಮಾಟವಿಹುದೋ ಸ್ವಾತಂತ್ರ್ಯ […]