ರಾಷ್ಟ್ರದೇವಗೆ ಪ್ರಾಣದೀವಿಗೆ ಸೇವೆಯಾಗಲಿ ನಾಡಿಗೆ ಮೃತ್ಯು ಭೃತ್ಯನು ಹಿಂದುಭೂಮಿಗೆ ಮರಣ ಕಾದಿದೆ ಸಾವಿಗೆ || ಪ || ಕೋಟಿಕೋಟಿಯ ತರುಣ ಧಮನಿಯು ರಾಷ್ಟ್ರಪ್ರೇಮದ ಸ್ರೋತದಿ ನಾಳದಾಳದ ನೆತ್ತರೊರೆಯುವ ದೇಶ ಧರ್ಮದ ಗಾನದಿ ಹೃದಯಹೃದಯವು ದುರ್ಗವಾಗಿದೆ ಅರಿಯನಳಿಸಲು ನಿಂತಿದೆ ಹಿಂದಿನಂತೆಯೆ ಹಿಂದು ಚೇತನವಿಂದು ಜಾಗೃತವಾಗಿದೆ || 1 || ಕಾಲಕಾಲಕೆ ಕ್ರಾಂತಿಶೂರರ ಕಣಕೆ ಕಳುಹುತ ಬೆದರದೆ ಹಿಂದುದೇಶದ ಯುವಜನಾಂಗದ ಧ್ಯೇಯಬಾವುಟವೇರಿದೆ ಹಗೆಯ ತುಳಿಯುತ ಗಗನದೆತ್ತರ ಬೆಳೆದು ನಿಲ್ಲುವ ಪೌರುಷ ಪ್ರಕಟವಾಗಿದೆ ರಾಷ್ಟ್ರಗೌರವ ಉಳಿಸಿ […]