ಎಚ್ಚರಗೊಳ್ಳಿ ಯುವಜನರೆ, ನಾsಡರಕ್ಷಣೆ ನಮ್ಮ ಹೊಣೆ | ಜಡತೆಯ ತೊರೆದು ಭ್ರಮೆಯನು ಹರಿದು ಬದಲಿಸಬನ್ನಿ ವಿಶ್ವವನೇ ಕದಲಿಸ ಬನ್ನಿ ಪೃಥ್ವಿಯನೇ || ಪ || ಜಗವನೆ ಜಯಿಸಿದ ಸಂಸ್ಕೃತಿ ಎಮ್ಮದು ಎಂಬುದನೆಂದಿಗು ಮರೆಯದಿರಿ ಪಶ್ಚಿಮದಿಕ್ಕಿನ ಭೋಗಜಗತ್ತಿನ ಥಳುಕಿಗೆ ನೀವ್ ಬಲಿಯಾಗದಿರಿ ಅಂಧಾನುಕರಣೆಯ ಮಾಡದಿರಿ ನಾsಡರಕ್ಷಣೆ ನಮ್ಮ ಹೊಣೆ, ಬದಲಿಸಬನ್ನಿ ವಿಶ್ವವನೇ || 1 || ಐಕ್ಯವ ಮರೆತು ಸ್ವಾರ್ಥದಿ ಮೆರೆದು ನಾಡಿದು ದಾಸ್ಯಕೆ ಒಳಗಾಯ್ತು ಅರಿಗಳ ಕುಹಕದ ಸಂಚಿಗೆ ಸಿಲುಕಿ ತಾಯ್ನೆಲವೆಮ್ಮದು ಹೋಳಾಯ್ತು ಭಾರತಮಾತೆಗೆ ಗೋಳಾಯ್ತು ನಾಡರಕ್ಷಣೆ […]