ಜಯತು ಕೇಶವ ಜಯತು ಕೇಶವ, ನಾದ ನಭ ಮೇ ಭರ ರಹಾ ಹೈ || ಪ || ಧ್ವನಿ ಪಣವ ಕಾ ಧಿಮಿಮಿ ಧಿದ್ ಬಜ ರಹಾ ಕಣ ಕಾ ಅಖಂಡಿತ ಕೇಸರೀ ಧ್ವಜ ಕೀ ಪ್ರಭಾ ಸೇ ಹೋ ರಹಾ ಪ್ರಾಕಾರ ಮಂಡಿತ ಜಲಧಿ ಮೇ ಬಿಂದುತ್ವ ಖೋಕರ ಯುವಕಗಣ ಕಟಿಬದ್ಧ ಹೋಕರ ಸಂಚಲನ ಸೇ ಗಗನ ಮಂಡಲ ಕಂಪಕಂಪಿತ ಕರ ರಹಾ ಹೈ || 1 || ಗರ್ವ ಸೇ […]
ನಾಡಸೇವೆಯೆ ನಮ್ಮ ಜೀವನದ ಉಸಿರು ಧನ್ಯತೆಯೆ ಬಹುಮಾನ ಬೇಡೆಮಗೆ ಹೆಸರು || ಪ || ಮೂರು ದಿನ ಬಾಳ್ವೆಯದು ಸಾರ್ಥಕವು ಆಗುವುದು ಆದರ್ಶದಮೃತವ ಸ್ವೀಕರಿಸಿದಾಗ ಪತಿತರುದ್ಧಾರದ ಪುಣ್ಯತಮ ಕಾಯಕದಿ ಒಮ್ಮನದಿ ಒಗ್ಗೂಡಿ ಸಹಕರಿಸಿದಾಗ || 1 || ಬರಿಯ ಬೋಧನೆಗಿಲ್ಲಿ ಕಿಂಚಿತ್ತು ಬೆಲೆಯಿಲ್ಲ ವಚನ ಶೂರರಿಗೆಂದು ಶಾಶ್ವತದ ನೆಲೆಯಿಲ್ಲ ಕಣ್ಣ ಮುಂದಿರೆ ನಾಕ ಬೆನ್ನ ಹಿಂದೆಯೆ ನರಕ ಮುನ್ನಡೆದು ಶ್ರಮಿಸುವವಗೆಂದಿಗೂ ಸೋಲಿಲ್ಲ || 2 || ನುಡಿವ ಮಾತಿಗೆ ಶೋಭೆ ನಮ್ಮದೊಂದೊಂದು ಕೃತಿ ನೀಡಬೇಕಿಹುದಿಂದು ಕಾಯಕಕೆ ಶೀಘ್ರಗತಿ […]
ನನ್ನ ನಾಡ ಚೆನ್ನ ನಾಡ ಬನ್ನಬಡುತ ಪೊರೆಯುವಾ ನನ್ನಿಯಿಂದ ತಾಯಿನಾಡ ಹೊನ್ನ ಸಿರಿಯ ಬೆಳಗುವಾ || ಪ || ರಾಮಕೃಷ್ಣ ವಿದ್ಯಾರಣ್ಯ ವ್ಯಾಸರನ್ನು ಸ್ಮರಿಸುವಾ ಬುದ್ಧ ಬಸವ ಶಂಕರಾದಿ ಗುರುಗಳನ್ನು ನಮಿಸುವಾ ಶಿವ ಪ್ರತಾಪ ಹರಿಹರಾದಿ ಭೂಪರನ್ನು ಸ್ಮರಿಸುವಾ ಚಂದ್ರಗುಪ್ತ ಪುಲಿಕೇಶಿ ವೀರರನ್ನು ನಮಿಸುವಾ ನಾಡಮೇಲ್ಮೆಗಾಗಿ ದುಡಿದ ಇವರ ಸ್ಮರಣೆ ಮಾಡುವಾ ನಾಡಮೇಲ್ಮೆಯಲ್ಲಿ ನಮ್ಮ ಮೇಲ್ಮೆಯನ್ನು ಕಾಣುವಾ || 1 || […]
ಧ್ಯೇಯನಾದ ನಿನಾದವಾಗಿದೆ ತರುಣ ಧಮನಿ ಧಮನಿಗಳಲಿ ಅಮೃತತ್ವದ ಅಮರ ಚಿಂತನೆ ಸ್ಫುರಿತಗೊಂಡಿದೆ ಕಣ್ಣಲಿ || ಪ || ಮಾತೃ ಮಣ್ಣಿನ ಯಜ್ಞ ಜ್ವಾಲೆಗೆ | ಸ್ವಾರ್ಥ ದಹಿಸಿದೆ ಸ್ಫೂರ್ತಿ ಮೂಡಿದೆ ಮೋಹ ದೇಹಗಳೊಟ್ಟಿ ಕಟ್ಟಿಗೆ | ಭಸ್ಮವಾಗಿದೆ ಭುಮಿಯ ಬೆಸುಗೆಗೆ || 1 || ಸವಾಲು ಸಾಸಿರ ಸಾಲುಗಟ್ಟಲಿ | ಕೋಟಿ ಕಂಠಗಳೆದ್ದು ನಿಂತಿವೆ ಕಷ್ಟ ಬೆಟ್ಟಗಳೆಲ್ಲ ಸಹಿಸುವ | ಮೊನಚು ಮೂಡಿದೆ ಎದೆಯಲಿ […]