ನನ್ನೊಳಗೆ ನಾನಿಳಿದು

ನನ್ನೊಳಗೆ ನಾನಿಳಿದು ನನ್ನಿರವ ನಾ ತಿಳಿದು ನನ್ನಿಯಾ ತಿಳಿಗೊಳದಿ ನಾನೀಸಬೇಕು ನನ್ನ ಹೃದಯದ ಪುರದಿ ನೆಲೆಸಿರುವ ಚಿನ್ಮಯನ ಕಣ್ಣೆದುರು ಕಾಣುವರೆ ಮನ ತೊಳೆಯಬೇಕು ||1|| ಸ್ವಾಂತರಂಜನೆಯೊಂದೇ ಏಕಾಂತದನುಭೂತಿ ಪರ ಹಿತ ಪಥವಹುದು ಪರಮಪದಕೆ ಸಮರಸದ ಸಂಹಿತೆಯು ಸಮನಿಸುವ ಸುಮ ಮನವು ಸ್ವಾರ್ಥ ನಿಯಮನವೆಂಬ ವ್ರತವು ಬೇಕದಕೆ ||2|| ನಾ ನಿಮಿತ್ತನು ಮಾತ್ರ ನಿಯಾಮಕನು ಬೇರಿಹನು ಪೂರ್ವ ನಿಗದಿತ ಕಾರ್ಯ; ಕರಣ ನಾನು ಎಲ್ಲರೊಳಗಿನ “ನಾನು” ಒಂದೆಂಬ ಅನುಭಾವ ಸಿದ್ದಿಸಿದ ಜೀವನವು ಮಧುರ ಜೇನು ||3|| ದೃಶ್ಯದನುಭವಕಿಹುದು ಪರಿಮಿತಿಯ […]

Read More

ಜನನಿ ಓ ಜನನೀ

ಭಾರತಿ ನಿನ್ನಯ ಅಡಿಗಳಿಗೆ ಪೊಡಮಡುವೆ ನಾ ಅಡಿಗಡಿಗೆ ಜನನಿ ಓ ಜನನೀ ಜನನಿ ಜನ್ಮಭೂಮಿ || ಪ || ಜನ್ಮ ಜನ್ಮದಾ ಪುಣ್ಯದ ಫಲವು ಕರುಣೆಯ ತೋರಿದ ಒಲವಿನ ಬಲವು ಬಂದಿಹೆ ಧರೆಗೆ ನಿನ್ನೊಡಲೊಳಗೆ ಕೋಟಿ ಕೋಟಿ ಜನ ಸೋದರರೆನಗೆ || 1 || ಮೇಲೆ ಹಿಮಾಚಲ ಕಾಲಡಿ ಕಡಲು ಬಂಗಾರದ ನಿಧಿ ತುಂಬಿದ ಒಡಲು ಶ್ರೀಗಂಧದ ಸೌಗಂಧವು ತುಂಬ ಏನೆಂಬೆನು ನೀ ಸ್ವರ್ಗದ ಬಿಂಬ! || 2 || ಉಜ್ವಲ ಕಲೆ ಸಂಸ್ಕೃತಿಗಳ ನಾಡು ಕೆಚ್ಚೆದೆ […]

Read More

ಎನ್ನೆದೆಯ ಬಿಸಿರಕ್ತ

ಎನ್ನೆದೆಯ ಬಿಸಿರಕ್ತ ಕುದಿಕುದಿಸಿ ಮಸಿಮಾಡಿ ನಾ ಬರೆಯಬಲ್ಲೆನೇ ನಾನು ಕವಿಯು ವಿಶ್ವ ಜನನಿಯ ಗರ್ಭ ಮಾತೃಭೂಮಿಯ ಬಸಿರು ತಾನ್ ತಪಿಸುತಿರೆ ಹೇಳಲಾವ ಪರಿಯು            || ಪ || ದುರ್ಬಲರ ಮರ್ದಿಸುತ ಪಶುಬಲದಿ ವರ್ಧಿಸುತ ರಾಷ್ಟ್ರರಾಷ್ಟ್ರಗಳ ಸ್ವಾತಂತ್ರ್ಯ ಸೆಳೆಯುತ್ತ ಸುಲಿಗೆ ಸಂಸ್ಕೃತಿಯೆಂದು ತಿಳಿದಿರುವ ಪಾಪಿಗಳ ಮುರಿವ ಲೇಖನಿ ಬೇಕು ರಕ್ತವದಕೆ ಮಸಿ           || 1 || ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ ಮೂರಕ್ಷರದೊಳೇನು ಮಾಟವಿಹುದೋ ಸ್ವಾತಂತ್ರ್ಯ […]

Read More