ನನ್ನೊಳಗೆ ನಾನಿಳಿದು ನನ್ನಿರವ ನಾ ತಿಳಿದು ನನ್ನಿಯಾ ತಿಳಿಗೊಳದಿ ನಾನೀಸಬೇಕು ನನ್ನ ಹೃದಯದ ಪುರದಿ ನೆಲೆಸಿರುವ ಚಿನ್ಮಯನ ಕಣ್ಣೆದುರು ಕಾಣುವರೆ ಮನ ತೊಳೆಯಬೇಕು ||1|| ಸ್ವಾಂತರಂಜನೆಯೊಂದೇ ಏಕಾಂತದನುಭೂತಿ ಪರ ಹಿತ ಪಥವಹುದು ಪರಮಪದಕೆ ಸಮರಸದ ಸಂಹಿತೆಯು ಸಮನಿಸುವ ಸುಮ ಮನವು ಸ್ವಾರ್ಥ ನಿಯಮನವೆಂಬ ವ್ರತವು ಬೇಕದಕೆ ||2|| ನಾ ನಿಮಿತ್ತನು ಮಾತ್ರ ನಿಯಾಮಕನು ಬೇರಿಹನು ಪೂರ್ವ ನಿಗದಿತ ಕಾರ್ಯ; ಕರಣ ನಾನು ಎಲ್ಲರೊಳಗಿನ “ನಾನು” ಒಂದೆಂಬ ಅನುಭಾವ ಸಿದ್ದಿಸಿದ ಜೀವನವು ಮಧುರ ಜೇನು ||3|| ದೃಶ್ಯದನುಭವಕಿಹುದು ಪರಿಮಿತಿಯ […]
ನಿರ್ಮಾಣೋ ಕೇ ಪಾವನ ಯುಗ ಮೇ ಹಮ ಚರಿತ್ರೆ ನಿರ್ಮಾಣ ನ ಭೂಲೇ, ಸ್ವಾರ್ಥ ಸಾಧನಾ ಕೀ ಆಂಧೀ ಮೇ ವಸುಧಾ ಕಾ ಕಲ್ಯಾಣ ನ ಭೂಲೇ || ಪ || ಮಾನಾ ಅಗಮ ಅಥಾಹ ಸಿಂಧು ಹೈ ಸಂಘರ್ಷೋ ಕಾ ಪಾರ ನಹೀ ಹೈ, ಕಿಂತು ಡೂಬನಾ ಮಝಧಾರೋ ಮೇ ಸಾಹಸ ಕೋ ಸ್ವೀಕಾರ ನಹೀ ಹೈ, ಜಟಿಲ ಸಮಸ್ಯಾ ಸುಲಝಾನೇ ಕೋ ನೂತನ ಅನುಸಂಧಾನ ನ ಭೂಲೇ […]
ಆರದಿಹ ಆದರ್ಶ ಜ್ವಾಲೆಯ ಅರ್ಚಿಸುವೆ ನಾ ದಿನ ದಿನ ಗೊಳಿಸೆ ಸಾರ್ಥಕ ಶ್ರೇಷ್ಠ ಜೀವನ ಅರ್ಪಿಸುವೆ ತನುಮನಧನ || ಪ || ಜ್ಞಾನ ತಪಸಿನ ಪ್ರಭೆಯ ಬೀರುತ ಸಂಜೆ ಮುಂಜಾನೆಗಳಲಿ ನೆಲೆ ಪ್ರಶಾಂತಿಯ ಪರ್ಣಶಾಲೆಯ ಹೋಮ ಧೂಮದ ಮಡಿಲಲಿ ಬೆಳಗಿದಗ್ನಿಯ ನೃತ್ಯ ಜ್ಯೋತಿಯ ಪ್ರತಿನಿಧಿಯೆ ಶಿರವಂದನಾ || 1 || ರಣ ರಣಾಂಗಣದಲ್ಲಿ ಶೌರ್ಯದ ಸ್ಪೂರ್ತಿ ತೆರೆ ತೆರೆಯುಕ್ಕಿಸಿ ದೇಶ ಧರ್ಮದ ಘನತೆ ಗೌರವ ಕೀರ್ತಿ ಕಳಶವ ರಕ್ಷಿಸಿ ಮೆರೆದ ವೀರರ ಹೃದಯ ಪ್ರೇರಣೆ […]