ನಿಲ್ಲದಿರು ನಡೆಮುಂದೆ ಮುಂದೆ ನಡೆ ಮುಂದೆ

ನಿಲ್ಲದಿರು ನಡೆಮುಂದೆ ಮುಂದೆ ನಡೆ ಮುಂದೆ ಎಲ್ಲೆಯಾಗಸದಂಚು ಗುರಿಯದೊಂದೇ        || ಪ || ಕಷ್ಟಗಳ ಸಾಗರದಿ ಹೆದ್ದೆರೆಗಳೇ ಬರಲಿ ನಿಷ್ಠೆಯಲಿ ಕುಂದಿಲ್ಲ ಕೃತುಶಕ್ತಿ ಬಲದಿ ಸಾಹಸವೆ ಒರೆಗಲ್ಲು ನಿಶೆಯಳಿಸಿ ನೀ ನಿಂದೆ ಪ್ರಾಣ ಪಣ ಹೋರಾಟ ವಚನ ಪಾಲನೆಗೆಂದೆ   || 1 || ದೇಶವಿದು ಅಖಂಡ ನಾನದರ ಅಂಗ ಹಿಡಿದ ಧರ್ಮವ ಬಿಡೆನು ಪಡೆದೆ ಸತ್ಸಂಗ ದಣಿವಿಲ್ಲ ತಣಿವಿಲ್ಲ ಆಮಿಷಕೆ ಮಣಿದಿಲ್ಲ ಶರಣು ಶರಣೆಂಬೆ ಧರ್ಮ ರಕ್ಷಣೆಗೆಂದೆ        || 2 || ನನ್ನದೇನಿಲ್ಲವೀ ಜಗವೆಲ್ಲ ನಿನ್ನದೇ ನಾನೆಂಬ […]

Read More

ನಡೆಯುವಾ ನಡೆಯುವಾ (ಯೋಗ ನಡಿಗೆ ಗೀತೆ)

ನಡೆಯುವಾ ನಡೆಯುವಾ ಮುಂದೆ ಮುಂದೆ ನಡೆಯುವಾ ಯೋಗ ಯೋಗದಿಂದ ನಡೆದು ಯೋಗಚಿತ್ತರಾಗುವ || ಪ || ರಾಗ ದ್ವೇಷಗಳನು ತೊರೆದು ಮಾಗಿದಂಥ ಮನವ ಪಡೆದು ಸಾಗಿದಂತೆ ಗೆಲುವ ನಲಿವ ತ್ಯಾಗಬಲವ ಹೊಂದುವಾ || 1 || ಮಿಡಿವ ಎದೆಯ ಹಿಡಿತ ಗಳಿಸಿ ತುಡಿವ ಮನಕೆ ದೃಢತೆ ಕಲಿಸಿ ಜಡತೆ ಪಡೆದ ತನುವ ದುಡಿಸಿ ಪ್ರಾಣಶಕ್ತಿಗಳಿಸುವಾ || 2 || ಯೋಗೀಶ್ವರ ಯೋಗೇಶ್ವರ ಪತಂಜಲಿಯ ಭಾರತಕೆ ಬಾಗುತ್ತಲಿ ಸಾಗುತ್ತಲಿ ಭಾರತರೇ ಆಗುವಾ || 3 || ಪಂಚತಂತ್ರದಾ ಪ್ರಪಂಚ […]

Read More

ಬನ್ನಿ ಹಿಂದು ವೀರರೇ ಮುಂದೆ ಸಾಗುವಾ

ಬನ್ನಿ ಹಿಂದು ವೀರರೇ ಮುಂದೆ ಸಾಗುವಾ ವೀರಮಾತೆ ಪುತ್ರರೆಂದು ಧೀರ ಸಂತಾನರೆಂದು ಧರೆಯೊಳಿಂದು ಸಾರುವಾ ಮುಂದೆ ಸಾಗುವಾ || ಪ || ತಾಯ ಸೇವೆಗಾಗಿ ಬನ್ನಿ ಧ್ಯೇಯಕಾಗಿ ದುಡಿವ ಬನ್ನಿ ನಿದ್ದೆ ತೊರೆಯುವಾ, ಎದ್ದು ನಿಲ್ಲುವಾ, ಸಿದ್ಧರಾಗುವಾ ಕತ್ತಲನ್ನು ಕಬಳಿಸುತ್ತ, ಸುತ್ತ ಬೆಳಕನರಳಿಸುತ್ತ ಮುಕ್ತ ರವಿಯು ಮೂಡುವಾ ನೋಟ ನೋಡುವಾ || 1 || ಭಗವ ಧ್ವಜ ಹಾರುತಿಹುದು, ಮುಗಿಲ ಮೇಲೇರುತಿಹುದು ಶುಭವ ಕೋರುತಾ, ಅಭಯವೀಯುತಾ, ಪ್ರಭೆಯ ಬೀರುತಾ ಭೋಗ ವಿಷಯ ರಾಗ ತ್ಯಜಿಸಿ, ತ್ಯಾಗ ಭಾವ […]

Read More

ಧಾವಿಸು ಮುಂದೆ ಧಾವಿಸು

ಧಾವಿಸು ಮುಂದೆ ಧಾವಿಸು ಧೀರಪಥದಿ ಅಂತಿಮ ಜಯ ನಿನ್ನದೆಂದೆ ಭಾವಿಸು || ಪ || ಸೋಲರಿಯದ ಶಕ್ತಿ ನಿನದು ಸಾವರಿಯದ ಸಂತತಿ ಕಾಲನ ಜತೆ ಕಾಲನಿಡುವ ನಿನದಜೇಯ ಸಂಸ್ಕೃತಿ ನಿನಗೆ ಹಾಲನೆರೆದ ತಾಯಿ ಸನಾತನೆ ಭಾರತಿ ಅವಳ ಗರಿಮೆ ಗಳಿಕೆಗಾಗಿ ಜೀವಿಸು || 1 || ಅಂಜುವೆದೆಯ ಕದವ ತೆರೆದು ಧ್ಯೇಯಜಲವ ಚಿಮುಕಿಸು ನಂಜನುಂಗಿ ಅಮರನಾಗು ಧೈರ್ಯಧಾರೆ ಧುಮುಕಿಸು ಮಂಜು ಹರಿದು ಅರಿಯ ಎದುರು ವಿಜಯಖಡ್ಗ ಝಳಪಿಸು ಹೋರಿಗುರಿಯ ಸೇರು ಬದುಕನರ್ಪಿಸು || 2 || ಹೇಡಿಗೆಷ್ಟು […]

Read More