ಒಂದಾಗಲಿ ಗುರಿಯೆಡೆ ಮುಂದಾಗಲಿ

ಒಂದಾಗಲಿ ಗುರಿಯೆಡೆ ಮುಂದಾಗಲಿ ನಾರಿಸಮೂಹದ ಮನಸುಗಳು ನಡೆನುಡಿಯಲಿ ಮೂಡಲಿ ನನಸಾಗಲಿ ಹಿಂದುತ್ವದ ಹೊಂಗನಸುಗಳು || ಪ || ಬಾಳಿಗೆ ಆಸರೆ ಭವ್ಯ ಪರಂಪರೆ ಆದರ್ಶದ ಹಿರಿಸಾಧನೆಗೆ ನಡೆಸುವ ಸಿದ್ಧತೆ ಪಡೆದು ಪ್ರಬುದ್ಧತೆ ಭರತಭೂಮಿಯಾರಾಧನೆಗೆ || 1 || ಗಳಿಸಲು ಏಳಿಗೆ ಅಭಿನವ ಪೀಳಿಗೆ ಶೀಲವೆರೆಯೆ ಹೃದಯದಾಳಕೆ ಬೇಕು ಸಮಸ್ಯೆಯ ಸ್ಥಿರ ಪರಿಹಾರಕೆ ಮಾತೃತ್ವದ ಮಂಗಳ ಹರಕೆ || 2 || ಮನಮನಗಳನೂ ತಿದ್ದಿ ರೂಪಿಸುವ ಮನೆಮನೆ ಬೆಳಗುವ ಕಾರ್ಯವಿದು ಸ್ತ್ರೀಶಕ್ತಿಯ ಅಭಿವ್ಯಕ್ತಿಯಗೊಳಿಸಿ ಘನತೆಗೊಯ್ವ ಕೈಂಕರ್ಯವಿದು || 3 […]

Read More