ಮತ್ತೆ ಮೂಡುತಿದೆ ಕತ್ತಲೆದೆಯಿಂದ

ಮತ್ತೆ ಮೂಡುತಿದೆ ಕತ್ತಲೆದೆಯಿಂದ ಪೌರುಷಮಯ ಇತಿಹಾಸ ಸತ್ತ ಬೂದಿಯಲು ಕಿಡಿಗಳ ತೆರೆಯುವ ಅನಂತತೆಯ ಚಿರಸಾಹಸ || ಪ || ಮನೆಗೆ ಕವಿದ ಇರುಳನು ತೊಳೆದು ಹಗಲ ಹಚ್ಚಿದುದೆ ಸಾಲದೆ ನೆರೆಜನ ಮೊರೆಯಿಡೆ ಕಾದಿ ಗೆಲಿಸಿದೆವು ಊರುಗೋಲಾಗಿ ಬಳ್ಳಿಗೆ || 1 || ಎಂದಿನಿಂದಲೋ ಹರಿದು ಬಂದಿರುವ ಜೀವನ ಧರ್ಮದ ಶ್ರುತಿಗೆ ಇಂದಿನ ಸ್ವರವನ್ನು ಹೊಂದಿಸಿ ಹಾಡುವ ಆಸೆ ಫಲಿಸುತಿದೆ ಬಾಳಿಗೆ || 2 || ಕಂಠ ಕಂಠದಲು ದನಿಗೊಳ್ಳುತ್ತಿದೆ ಶ್ರೀ ಸಾಮಾನ್ಯನ ಜಯಕಾರ ಮೂಲೆ ಮೂಲೆಯಲು ಮೈ […]

Read More

ಚೈತನ್ಯ ಮೂಡುತಿದೆ ಭಾರತದ ಬಾಂದಳದಿ

ಚೈತನ್ಯ ಮೂಡುತಿದೆ ಭಾರತದ ಬಾಂದಳದಿ ವಿಶ್ವಾಸ ಉದಿಸುತಿದೆ ಜನಮನದ ತಳದಲ್ಲಿ || ಪ || ಹೊಂಗನಸ ಹೊಂಬಿಸಿಲ ಪ್ರೇರಣೆಯ ಕಿರಣಗಳು ಸಾಕಾರ ಹೊಂದುತಿವೆ ಧನ್ಯತೆಯ ಪಡೆಯುತಿವೆ ದುಃಸ್ವಪ್ನಗಳ ತೆರದಿ ಅಲ್ಲಲ್ಲಿ ಗೋಚರಿಪ ದುಷ್ಕೃತ್ಯಗಳ ನಾಶ ಆಗಲಿದೆ ಧ್ರುವಸತ್ಯ || 1 || ಸ್ವಾರ್ಥತೊರೆದರ್ಪಣೆಯ ಭಾವಗಂಗೆಲಿ ಮಿಂದು ಧ್ಯೇಯವಸನವ ಧರಿಸಿ ಪ್ರೇಮ ಸುಮನಗಳಿಂದ ಮಾತೃ ಭೂ ಭಾರತಿಯ ಚರಣ ಸೇವಾವ್ರತದಿ ಕಟಿಬದ್ಧರಾಗೋಣ ಅರ್ಚನೆಗೆ ಅಣಿಯಾಗಿ || 2 ||

Read More