ಮನದ ಮೂಲೆಯಲ್ಲಿ ಮೊಳೆತ ಮಧುರ ಭಾವ ಸುಂದರ ಮಾತೆ ನಿನ್ನ ಮೂರ್ತಿಗೆನ್ನ ಹೃದಯವಾಯ್ತು ಮಂದಿರ || ಪ || ನಿನ್ನ ಹಿರಿಮೆಯರಿಮೆ ಎನ್ನ ಹೃದಯ ಹಸನುಗೊಳಿಸಿತು ಪ್ರೇಮದೊಡನೆ ಪೂಜ್ಯಭಾವ ಬೆರೆತು ಭಕ್ತಿ ಸ್ಫುರಿಸಿತು || 1 || ‘ನಾನು’ ಏನು ಎಂಬ ಅರಿವು ನನ್ನ ಒಳಗೆ ಉದಿಸಿತು ನಿನ್ನ ಜೊತೆಗೆ ಲೀನಗೊಳುವ ಭಾವವೊಂದು ಬೆಳೆಯಿತು || 2 || ನಮ್ಮೊಳಗಿನ ಭಾವ ಬೆಸುಗೆ ಗುರು ಭಗವೆಯೇ ಪ್ರೇರಕ ಮೇಲರಿಮೆಯ ಮೌಢ್ಯ ತೊಡೆದ ಮಹಾ ಮಾರ್ಗದರ್ಶಕ || 3 || ‘ನಾನು’ ಲೀನನಾದ […]